ಬೆಂಗಳೂರು: ಬೆಂಗಳೂರಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಈ ಬಗ್ಗೆ ನಾನು ಕಮಿಷನರ್ ಜೊತೆಗೆ ಮಾತಾಡಿದ್ದೇನೆ, ಈಗಾಗಲೇ ಗುಂಡಿ ಮುಚ್ಚೋಕೆ ಹೇಳಿದ್ದೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿ ಸಾಕಷ್ಟು ಮಳೆ ಆಗುತ್ತಿದೆ. ಬೇರೆ ಬೇರೆ ಸೈಕ್ಲೋನೆ ಆಗುತ್ತಿದೆ, ಮಳೆಯಿಂದ ಗುಂಡಿ ಮುಚ್ಚೋಕು ಕಷ್ಟ ಆಗುತ್ತಿದೆ, ನೀರು ನಿಂತು ಡ್ರೈ ಆಗುವವರೆಗೂ ಏನು ಮಾಡೋಕೆ ಆಗಲ್ಲ ಕೂಡಲೇ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ ಎಂದರು.
ನೀರು ನುಗ್ಗಿರುವ ಕಡೆ ಎಚ್ಚೆತ್ತುಕೊಂಡ ಸರಿ ಮಾಡಲು ಸೂಚನೆ ನೀಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಟೀಮ್ ಮಾಡಿ ಮರ ಬಿದ್ದಾಗ ಕಟ್ ಮಾಡಲು ಹೇಳಿದ್ದೇನೆ. ನಾನು ಕೂಡ ಸ್ಥಳಕ್ಕೆ ಹೋಗ್ತಿನಿ ದಸರಾ ಕಾರ್ಯಕ್ರಮ ಮುಗಿಸಿಕೊಂಡು ಬಂದು ಇದನೆಲ್ಲ ನೋಡಿಕೊಳ್ಳುತ್ತೇನೆ ಎಂದರು.
ಬೆಂಗಳೂರು ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನದಲ್ಲಿ ಇದೆ,ಅವರೆ ತೀರ್ಮಾನ ಮಾಡುತ್ತಾರೆ. ಸದ್ಯ ಮಳೆ ಅನಾಹುತದ ಬಗ್ಗೆ ಮೊದಲು ತೀರ್ಮಾನ ಮಾಡುವುದು ಎಂದರು.