ಬೆಂಗಳೂರು: ಸದ್ಯ ಚಿತ್ರರಂಗದಲ್ಲಿ ಮಾತ್ರವಲ್ಲ ರಾಜಕೀಯ ವಲಯದಲ್ಲೂ ಕಾಶ್ಮೀರಿ ಫೈಲ್ ಸಿನಿಮಾ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕರು ಈ ಸಿನಿಮಾ ನೋಡೋದಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಶಾಸಕರಿಗಾಗಿಯೇ ಇಂದು ವಿಶೇಷ ಪ್ರದರ್ಶನ ಕೂಡ ಆಯೋಜನೆ ಮಾಡಲಾಗಿದೆ.
ಮಂತ್ರಿ ಮಾಲ್ ನಲ್ಲಿ ಸ್ಕ್ರೀನಿಂಗ್ ಇದ್ದು, ವಿಧಾನಸೌಧದಿಂದ ಎರಡು ಬಸ್ ಗಳನ್ನ ಅರೆಂಜ್ ಮಾಡಲಾಗಿತ್ತು. ಸ್ಪೀಕರ್ ಕಾಗೇರಿ ಅವರ ನೇತೃತ್ವದಲ್ಲಿ ಸಿನಿಮಾ ನೋಡಲು 50 ಕ್ಕೂ ಹೆಚ್ಚು ಶಾಸಕರು ಮಾಲ್ ಗೆ ತೆರಳಿದ್ದಾರೆ.
ಈಗಾಗಲೇ ಕಾಶ್ಮೀರ್ ಫೈಲ್ ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವೆಡೆ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ಕರ್ನಾಟಕದಲ್ಲೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇಂದು ಸಿನಿಮಾ ನೋಡಲು ಕಾಂಗ್ರೆಸ್ ನ ಕೆಲವು ಶಾಸಕರು ಗೈರಾಗಿದ್ದಾರೆ ಎನ್ನಲಾಗಿದೆ.