ಕಾರವಾರ: ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಬಹಳಷ್ಟು ಅನಾಹುತ ಸಂಭವಿಸಿದೆ. ಶಿರೂರು ಗುಡ್ಡ ಕುಸಿತದಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋಜನರ ಬದುಕು ಬೀದಿಗೆ ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರದ ನಡೆಗೆ ಪ್ರಣವಾನಂದ ಸ್ವಾಮೀಜಿ ಬೇಸರ ಹೊರ ಹಾಕಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಸ್ವಾಮೀಜಿ, ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಶಿರೂರು ದುರಂತದಿಂದ ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಕೇವಲ 1 ಲಕ್ಷದ 20 ಸಾವಿರ ಹಣ ಮಾತ್ರ ನೀಡಿದೆ. ವಯನಾಡಿನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರ. ರಾಹುಲ್ ಗಾಂಧಿಯನ್ನು ಓಲೈಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿಯೇ ಅಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಮುಂದಾಗಿದೆ.
ಬೇರೆ ರಾಜ್ಯದ ಜನ ಕಷ್ಟದಲ್ಲಿದ್ದಾಗ ಪರಿಹಾರ ಕೊಡುವುದು ತಪ್ಪಲ್ಲ. ಆದರೆ ತಮ್ಮ ಪಕ್ಷದ ನಾಯಕನ ಮುಖ ನೋಡಿ ಪರಿಹಾರ ಕೊಡುವ ಇವರಿಗೆ ನಮ್ಮ ರಾಜ್ಯದ ಜನ ಬೀದಿ ಪಾಲಾಗಿರುವುದು ಕಣ್ಣಿಗೆ ಕಾಣುವುದಿಲ್ಲವಾ..? ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಯಾಕೆ ಮನೆ ಕಟ್ಟಿ ಕೊಡುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಲಾಭ ಪಡೆದುಕೊಳ್ಳುವಲ್ಲಿ ಬ್ಯುಸಿ ಆಗಿದ್ದಾರೆ. ತಾವೂ ಕಬಳಿಸಿದ ಆಸ್ತಿಯ ಸುರಕ್ಷತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಶಿರೂರು ದುರಂತದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಅಧಿವೇಶನದ ಉದ್ಧಕ್ಕೂ ಆರೋಪ ಪ್ರತ್ಯಾರೋಪಗಳೇ ಆಯ್ತು ಎಂದು ಸರ್ಕಾರದ ವಿರುದ್ಧ ಸ್ವಾಮೀಜಿ ಹರಿಹಾಯ್ದಿದ್ದಾರೆ.
ಸುದ್ದಿಒನ್, ಚಿತ್ರದುರ್ಗ, ಜನವರಿ.30 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಗುರುವಾರ, ಜನವರಿ. 30) ಹತ್ತಿ ಮಾರುಕಟ್ಟೆ ಇದ್ದು, ಧಾರಣೆಯಾದ…
2025 ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಾಗೇ ಜನರ ನಿರೀಕ್ಷೆಯೂ ಜಾಸ್ತಿ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ನಿರೀಕ್ಷೆ ಮಾಡಲಾಗುತ್ತಿದೆ.…
ಬೆಂಗಳೂರು: ಮಾಜಿ ಸಚಿವ ಕೆ.ಸುಧಾಕರ್ ನಿನ್ನೆ ವಿಜಯೇಂದ್ರ ವಿರುದ್ಧ ನೇರಾ ನೇರಾ ಸವಾಲು ಹಾಕಿದ್ದರು. ಅಹಂಕಾರವೆಲ್ಲ ಬೇಡ ಎಂಬ ಮಾತನ್ನ…
ದಿನಕ್ಕೆ 2 ಮೊಟ್ಟೆ ತಿಂದರೆ ತೂಕ ಕಡಿಮೆಯಾಗುತ್ತದೆಯೇ ? ತಜ್ಞರು ಹೇಳುವುದೇನು ? ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಯಸಿದರೆ,…
ಈ ರಾಶಿಯವರ ಕನಸು ನನಸಾಗುವ ದಿನ ಬಂದಿದೆ, ಈ ರಾಶಿಯವರಿಗೆ ಉದ್ಯೋಗ ಪ್ರಾಪ್ತಿ, ಈ ರಾಶಿಯವರಿಗೆ ಅಧಿಕಾರ ಹಾಗೂ ಧನಪ್ರಾಪ್ತಿ,…
ಸುದ್ದಿಒನ್ :ಪ್ರಯಾಗ್ರಾಜ್ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಕುರಿತು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟನೆ ನೀಡಿದೆ. ಕಾಲ್ತುಳಿತದಲ್ಲಿ 30…