ಬೆಂಗಳೂರು: ಬಿಜೆಪಿ ಸರ್ಕಾರ 40% ಸರ್ಕಾರ ಎಂಬ ಆರೋಪ ಕೇಳಿ ಬರುತ್ತಿದೆ. ಗುತ್ತಿಗೆದಾರ ಸಂತೋಷ್ ಕೂಡ ಇದೇ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಗುತ್ತಿಗೆದಾರರೆಲ್ಲಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಾಂಟ್ಯಾಕ್ಟ್ ಮಾಡಿ ದೂರು ನೀಡಿದ್ದಾರೆ. ಇದೇ ವಿಚಾರವಾಗಿ ಬಿಜೆಪಿ ನಾಯಕರು ಕೆಂಡಕಾರಿದ್ದಾರೆ. ಬಿಜೆಪಿ ನಾಯಕರ ಹೇಳಿಕೆ ಈ ಕೆಳಕಂಡಂತಿದೆ.
ನಳೀನ್ ಕುಮಾರ್ ಕಟೀಲ್: ಹೇಳುವುದಕ್ಕೆ ಸುಲಭ ಜಗತ್ತಿನಲ್ಲಿ ಎಲ್ಲರು ಕಳ್ಳು ಅಂತ ಹೇಳುವುದಕ್ಕೆ. ಆದರೆ ನಿರ್ದಿಷ್ಟವಾದ ದೂರು ಕೊಟ್ಟಾಗ ತಾನೇ ಈ ವ್ಯವಸ್ಥೆಯೊಳಗೆ ಶಿಕ್ಷೆಯಾಗುವುದು. ಆದರೆ ದೂರು ಕೊಡುವುದಕ್ಕೆ ತಯಾರಿಲ್ಲ. ನೆಗೆಟಿವ್ ಕ್ರಿಯೇಟ್ ಮಾಡುವ ಟೂಲ್ ಕಿಟ್ ಅಂಗವಾಗಿ ಈ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ವೀರಶೈವ ಮತ್ತು ಲಿಂಗಾಯತ ಒಗ್ಗಟ್ಟನ್ನು ಒಡೆದಿದ್ದು ಕೂಡ ಈ ಟೂಲ್ ಕಿಟ್ ಅಂಗವಾಗಿ. ನಾವೂ ಯಾವ ಸ್ವಾಮೀಜಿಗಳ ಬಳಿಯೂ ಹೋಗಲ್ಲ ಎಂದವರು ಹೋಗಿ ಉದ್ದುದ್ದ ಬೀಳುತ್ತಾ ಇರವುದು ಕೂಡ ಪಾರ್ಟ್ ಆಫ್ ಟೂಲ್ ಕಿಟ್. ಆ ಫೋಟೋ ನೋಡಿದೆ. ಅದರಲ್ಲಿ ಕಾಂಗ್ರೆಸ್ ನಾಯಕನು ಇದ್ದಾನೆ. ಒಂದು ವೇಳೆ ಲಂಛ ಕೇಳಿದವರಿಗೆ ಶಿಕ್ಷೆಯಾಗಬೇಕು ಎಂಬುದು ಅವರ ಉದ್ದೇಶವಾಗಿದ್ರೆ, ಕೋರ್ಟ್ ಇದೆ, ಲೋಕಾಯುಕ್ತವಿದೆ ಅಲ್ಲಿಗೆ ದೂರು ನೀಡಬಹುದು ಎಂದಿದ್ದಾರೆ.
ಮುಂದುವರೆದು ಮಾತನಾಡಿ, 40% ಆರೋಪ ಮಾಡುತ್ತಿರುವವರ ಬಳಿ ಏನು ಸಾಕ್ಷಿ ಇದೆ. 40% ಆರೋಪ ಮಾಡುತ್ತಿದ್ದೀರಿ ನೀವೂ 80% ಸರ್ಕಾರ. ಇದನ್ನು ನಾವೂ ಹೇಳುತ್ತಿಲ್ಲ ಇತಿಹಾಸ ಹೇಳುತ್ತಿದೆ. ಆದರೆ ಈ ಸರ್ಕಾರವನ್ನು 40% ಎಂಬುದಕ್ಕೆ ಸಾಕ್ಷಿ ಕೊಡಿ. ನೆರೆ ಸಂಗ್ರಹದ ಹಣದಲ್ಲಿಯೇ ಲೂಟಿ ಮಾಡಿರುವುದಿದೆ ಎಂದಿದ್ದಾರೆ.
ಬಿ ಸಿ ಪಾಟೀಲ್: ಇದೇ ವಿಚಾರವಾಗಿ ಮಾತನಾಡಿದ ಬಿ ಸಿ ಪಾಟೀಲ್, ಈ ರೀತಿ ಆರೋಪ ಮಾಡುತ್ತಿರುವ ಕೆಂಪಣ್ಣ ಅವರನ್ನು ಮೊದಲು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಯಾವುದೇ ಆಧಾರವಿಲ್ಲದೆ 40 ಪರ್ಸೆಂಟ್ ಕಮಿಷನ್ ಅಂತ ಹೇಳುವುದಲ್ಲ. ಅವರಿಗೆ ತಲೆ ಕೆಟ್ಟಿದೆ. ಇದು ಕಾಂಗ್ರೆಸ್ ಅವರ ಪ್ರಾಯೋಜಿತವಾಗಿದೆ ಎಂದಿದ್ದಾರೆ.
ಅಶ್ವತ್ಥ್ ನಾರಾಯಣ್: ಪ್ರತಿಪಕ್ಷದಲ್ಲಿ ಕೂತಿ ಬಾಯಿಗೆ ಬಂದ ಹಾಗೇ ಹೇಳಿಕೆ ಕೊಡಬಾರದು. ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಮುನಿರತ್ನ ಮೇಲೂ ಮಾಡಿದ ಆರೋಪಗಳಿಗೂ ಯಾವುದೇ ಉರುಳಿಲ್ಲ. 40% ಆರೋಪದಲ್ಲೂ ಯಾವುದೇ ಉರುಳಿಲ್ಲ. ಸುಮ್ಮನೆ ಈ ರೀತಿ ಮಾತನಾಡುವುದರಿಂದ ಯಾರಿಗೂ ಗೌರವ ಸಿಗಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಶ್ರೀನಿವಾಸ್ ಪೂಜಾರಿ: ವಿರೋಧ ಪಕ್ಷದವರ ಬಳಿ ದೂರು ನೀಡುವುದು ಎಷ್ಟು ಸರಿ. ಕೆಂಪಣ್ಣ ಅವರು ವಿರೋಧ ಪಕ್ಷದವರ ಬಳಿ ಯಾಕೆ ಹೋಗಿದ್ದರು. ಪ್ರಜಾಪ್ರಭುತ್ವದಲ್ಲಿ ಆರೋಪ ಮಾಡುವುದು, ತನಿಖೆ ಮಾಡಿ ಎಂದು ಹೇಳುವ ಸ್ವತಂತ್ರ್ಯವಿದೆ. ಆದರೆ ಅದಕ್ಕೆ ದೂರು ಕೊಡುವುದಕ್ಕೆ ಲೋಕಾಯುಕ್ತವಿದೆ, ಕೋರ್ಟ್ ಇದೆ. ನ್ಯಾಯ ಸಿಗುವುದು ಎಲ್ಲಿ ಕೋರ್ಟ್ ನಲ್ಲಿ. ಅದನ್ನು ಬಿಟ್ಟು ವಿರೋಧ ಪಕ್ಷದವರಲ್ಲಿ ಸಿಗುತ್ತಾ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಕ್ರೋಶ ಹೊರ ಹಾಕಿದ್ದಾರೆ.