ಸುದ್ದಿಒನ್, ಚಳ್ಳಕೆರೆ, (ಅ.04) : ಇಲ್ಲಿನ ಜಿಟಿಟಿಸಿ ಕೇಂದ್ರದಲ್ಲಿ ವಿದ್ಯಾಭ್ಯಾಸ ಆರಂಭವಾದರೆ ನಿಮ್ಮ ವೃತ್ತಿ ಪ್ರಾರಂಭವಾದಂತೆ ಎಂದು ಶಾಸಕ ಟಿ.ರಘುಮೂರ್ತಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಜಿಟಿಟಿಸಿ ಕೇಂದ್ರದ ತರಗತಿಗಳ ಪ್ರಾರಂಭೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು ಹಿಂದುಳಿದ ತಾಲ್ಲೂಕಿನಲ್ಲಿ ನಿರುದ್ಯೋಗವೇ ಹೆಚ್ಚಿನದಾಗಿ ತಾಂಡವಾಡುತ್ತಿರುವ ಇಲ್ಲಿ ಜಿಟಿಟಿಸಿ ಕೇಂದ್ರ ಆರಂಭವಾಗಿರುವುದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ನಿರುದ್ಯೋಗ ಮಟ್ಟ ಕಡಿಮೆಯಾಗಿ, ಶೈಕ್ಷಣಿಕವಾಗಿ ತಾಲ್ಲೂಕು ಅಭಿವೃದ್ಧಿಯಾಗಬೇಕೆಂದರೆ ವಿದ್ಯಾರ್ಥಿ ಗಳು ನಿರಂತರ ಶ್ರಮಪಟ್ಟು ಕಲಿತಾಗ ಮಾತ್ರ ಎಂದು ಹೇಳಿದರು.
ಜಿಟಿಟಿಸಿ ಕೇಂದ್ರದ ಆರಂಭವಾಗಿರುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕಲಿಯುವಂತದ್ದು ಬಹಳ ಇರುತ್ತದೆ. ಅಲ್ಪಾವಧಿ ಉದ್ಯೋಗಾಧಾರಿತ ತರಬೇತಿಗಳು ಜಿಟಿಟಿಸಿ ಕೇಂದ್ರದಲ್ಲಿ ಕಲಿಯಬಹುದು ಎಂದು ಹೇಳಿದರು.
ಜಿಟಿಟಿಸಿ ಕೇಂದ್ರದಲ್ಲಿ ನಿಮ್ಮ ತರಬೇತಿ 3 ವರ್ಷ ಆದಾಗ 12 ರಿಂದ 15 ಸಾವಿರ ಸ್ಟೈ ಫಂಡ್ ನೀಡಿ ತರಬೇತಿ ನೀಡಲಾಗುತ್ತದೆ ಎಂದು ಹೇಳಿದ ಅವರು ಕಲಿಕೆ ಕಷ್ಟ ಅಂತಹ ವಿದ್ಯಾಬ್ಯಾಸವನ್ನು ಮೊಟಕುಗೊಳಿಸಬೇಡಿ ಇಲ್ಲ ಕಷ್ಟಪಟ್ಟು ಕಲಿತರೆ ಮುಂದೆ ನಿಮ್ಮ ಜೀವನ ಉತ್ತಮವಾಗಿರುತ್ತದೆ, ಪೋಷಕರು ಕೂಡ ಮಕ್ಕಳ ವಿದ್ಯಾಬ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಬೇಡಿ ಮಕ್ಕಳ ವಿದ್ಯಾಬ್ಯಾಸಕ್ಕೆ ಸಹಕಾರ ನೀಡಬೇಕು ಎಂದು ಪೋಷಕರಿಗೆ ಶಾಸಕರು ತಿಳಿಸಿದರು.
ಈ ವೇಳೆನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮೀ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಜೈ ತುನ್ಬಿ ಮಲ್ಲಿಕಾ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಸದಸ್ಯ ರಾದ ವೈ.ಪ್ರಕಾಶ್ , ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಜಿಟಿಟಿಸಿ ಕೇಂದ್ರ ವಿಭಾಗದ ಮುಖ್ಯಸ್ಥ ಲಕ್ಷ್ಮಣ್ ನಾಯ್ಕ್, ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ಹೆಚ್ ಪಿಪಿಸಿ ಕಾಲೇಜಿನ ಪ್ರಾಂಶುಪಾಲರಾದ ಶಿವಲಿಂಗಪ್ಪ ಹಾಗೂ ವಿದ್ಯಾರ್ಥಿಗಳ ಪೋಷಕರು ಇದ್ದರು.