ಚೀನಾ: ಚೀನಾ ಸರ್ಕಾರ ಆದೇಶವೊಂದ ನೀಡಿದೆ. ದಿನ ನಿತ್ಯ ಬಳಸುವ, ಅಗತ್ಯ ಆಹಾರ ಸಾಮಾಗ್ರಿಗಳನ್ನ ಕೂಡಿಟ್ಟುಕೊಳ್ಳುವಂತೆ ತನ್ನ ಪ್ರಜೆಗಳಿಗೆ ಮನವಿ ಮಾಡಿದೆ. ಆದ್ರೆ ಪ್ರಜೆಗಳಿಗೆ ಮಾತ್ರ ನಿಖರ ಕಾರಣ ನೀಡಿಲ್ಲ.
ಸಾಮಾಗ್ರಿಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತೆ ಅಂತಷ್ಟೇ ಜನರಿಗೆ ತಿಳಿಸಿದೆ. ಆದ್ರೆ ನಿಖರವಾದ ಕಾರಣವನ್ನ ಎಲ್ಲಿಯೂ ತಿಳಿಸಿಲ್ಲ. ತುರ್ತು ಸಂದರ್ಭ ಬರುವ ಸಾಧ್ಯತೆ ಇದೆ. ಆದಷ್ಟು ದಿನನಿತ್ಯ ಬಳಕೆಯ ವಸ್ತುಗಳನ್ನ ಸಂಗ್ರಹಿಸಿಟ್ಟುಕೊಳ್ಳಿ ಎಂಬ ಆದೇಶ ಹೊರಡಿಸಿದೆ.
ಚೀನಾ ಸರ್ಕಾರ ಈ ಆದೇಶ ನೀಡಿರುವುದು ಪಕ್ಕದ ರಾಷ್ಟ್ರಗಳಿಗೆ ಹಲವು ಅನುಮಾನಗಳನ್ನ ಮೂಡಿಸಿದೆ. ಕಾರಣವನ್ನೇ ಹೇಳದೆ ಈ ರೀತಿ ಆದೇಶ ಹೊರಡಿಸಿದ್ಯಾಕೆ ಅನ್ನೋ ಪ್ರಶ್ನೆಗಳು ಉದ್ಭವಿಸಿವೆ. ಚೀನಾಗೆ ತಿನ್ನೊ ಅನ್ನಕ್ಕೂ ಹಾಹಾಕಾರ ಶುರುವಾಯ್ತಾ ಅನ್ನೋ ಪ್ರಶ್ನೆಗಳು ಹುಟ್ಟುಕೊಂಡಿವೆ.