ಮಂಡ್ಯ: ವಿಧಾನ ಪರಿಷತ್ ಚುನಾವಣೆಯ ಬಿಸಿ ಜೋರಾಗಿದೆ. ಚುನಾವಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಚಿವ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ವಿರುದ್ಧ ಹರಿಹಾಯ್ದಿದ್ದಾರೆ.
ಮಂಡ್ಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದಿನೇಶ್, ಜೆಡಿಎಸ್ ನಿಂದ ಅಪ್ಪಾಜಿ ಗೌಡ ಸ್ಪರ್ಧಿಸಿದ್ದಾರೆ. ಇವರಿಬ್ಬರ ವಿರುದ್ಧ ಹರಿಹಾಯ್ದಿರುವ ಸಚಿವ ಸೋಮಶೇಖರ್, ಅಪ್ಪಾಜಿಗೌಡ ಆರು ವರ್ಷ ಅಧಿಕಾರ ನಡೆಸಿದ್ದಾರೆ. ಆ ಅಧಿಕಾರಾವಧಿಯಲ್ಲಿ ಯಾವುದೇ ಗ್ರಾಮ ಸಭೆ ನಡೆಸಲಿಲ್ಲ. ಅನುದಾನ ತರುವಲ್ಲಿಯೂ ವಿಫಲರಾಗಿದ್ದಾರೆ ಎಂದಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ವಿರುದ್ಧ ಗರಂ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೊಡುವ ಕಾಸಿಗಾಗಿ ಜನ ಅವರ ಹಿಂದೆ ಹೋಗ್ತಾರೆ. ಗತಿಗೆಟ್ಟು ಕುಳಿತಿದ್ದ ಕಾಂಗ್ರೆಸ್ ಜಿಲ್ಲಾ ನಾಯಕರು ದಿನೇಶ್ ಬಳಿ ಕಾಸಿದೆ ಅಂತ ಓಡಾಡ್ತಿದ್ದಾರೆ. ಗೆದ್ದರೆ ಅನುದಾನದ ಹೊಳೆ ಹರಿಸುತ್ತೇನೆಂದು ದಿನೇಶ್ ಹೇಳ್ತಾನೆ. ಏನು ಹರಿಸ್ತಾನೆ ಅವನು. ರಾಜ್ಯದಲ್ಲೇನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆಯಾ ಎಂದು ಪ್ರಶ್ನಿಸಿದ್ದಾರೆ.
ಇದೆ ವೇಳೆ ಬಿಎಸ್ ಯಡಿಯೂರಪ್ಪ ಅವರನ್ನ ಹೊಗಳಿದ ಎಸ್ ಟಿ ಸೋಮಶೇಖರ್, ಯಡಿಯೂರಪ್ಪ ಅಧಿಕಾರದಲ್ಲಿದ್ದರು ರಾಜಾಹುಲಿನೆ ಇಲ್ಲದೇ ಹೋದರು ಅವರು ರಾಜಾಹುಲಿನೆ ಎಂದಿದ್ದಾರೆ.