Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಂಗವಾಗಿ ನಡೆದ ಭ್ರಮಾರಂಭ ಸಹಿತ ಶ್ರೀ ಶೈಲ ಮಲ್ಲಿಕಾರ್ಜನ ಸ್ವಾಮಿಯ ಕಲ್ಯಾಣ ಮಹೋತ್ಸವ ಸಮಾರಂಭ

Facebook
Twitter
Telegram
WhatsApp

ಚಿತ್ರದುರ್ಗ,(ಮೇ.09) :  ಅಖಿಲ ಭಾರತ ವೀರಶೈವ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕ, ವೀರಶೈವ ಲಿಂಗಾಯತ ಸಂಘಟನೆಗಳ ಸಹಕಾರದೊಂದಿಗೆ ಭಾನುವಾರ ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಆವರಣದಲ್ಲಿ ಭ್ರಮಾರಂಭ ಸಹಿತ ಶ್ರೀ ಶೈಲ ಮಲ್ಲಿಕಾರ್ಜನ ಸ್ವಾಮಿಯ ಕಲ್ಯಾಣ ಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು.

ಅಂದು ಬೆಳಿಗ್ಗೆ ನಗರದ ಚಳ್ಳಕೆರೆ ರಸ್ತೆಯ  ಟಯೋಟ ಷೋ ರೂಂ ಬಳಿ ಸ್ವಾಗತಿಸಿ ನಂತರ  ಮದಕರಿ ಗಣಪತಿ ದೇವಾಲಯದಿಂದ ಮರವಣಿಗೆ ಪ್ರಾರಂಭವಾಗಿ ನಗರದ ದೊಡ್ಡಪೇಟೆ, ಚಿಕ್ಕಪೇಟೆ, ಸಂತೇಪೇಟೆ ಮಾರ್ಗವಾಗಿ ಬಸವೇಶ್ವರ ಟಾಕೀಸ್ ಮೂಲಕ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯ ಆವರಣವನ್ನು ತಲುಪಿತು.

ಶ್ರೀ ಶೈಲ ಮಲ್ಲಿಕಾರ್ಜನ ಸ್ವಾಮಿ ಮತ್ತು ಭ್ರಮರಾಂಭ ದೇವಾಲಯದಿಂದ ಆಗಮಿಸಿದ್ದ ಅರ್ಚಕರು ಸ್ವಾಮಿಯ ಕಲ್ಯಾಣ ಮಹೋತ್ಸವವನ್ನು ನೇರವೇರಿಸಿ ಕೊಟ್ಟರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ವಿದ್ಯಾ ಸಂಸ್ಥೆಯ ಕಾರ್ಯದರ್ಶೀ ವಿಜಯಕುಮಾರ್, ವೀರಶೈವ ಸಮಾಜದ ಮುಖಂಡರಾದ ಕೆಇಬಿ ಷಣ್ಮುಖಪ್ಪ, ಜಂಗಮ ಸಮಾಜದ ಮಲ್ಲಿಕಾರ್ಜನಪ್ಪ ಸ್ವಾಮಿ, ಮಹೇಶ್, ರುದ್ರೇಶ್, ವೀರಣ್ಣ, ಅಖಿಲ ಭಾರತ ವೀರಶೈವ ಮಹಾಸಬಾದ ಅಧ್ಯಕ್ಷ ಮಹಡಿ ಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಬಸವರಾಜು, ಕಾರ್ಯದರ್ಶಿ ರೀನಾ ವೀರಭದ್ರಪ್ಪ, ರೋ.ಸಂರ್ಸಥೆಯ ಎಸ್.ವೀರೇಶ್, ಪರಮೇಶಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚೀನಾ-ಭಾರತೀಯ ಸೇನೆಯ ಸಿಹಿ ವಿನಿಮಯ

ಸುದ್ದಿಒನ್ : ಭಾರತ ಮತ್ತು ಚೀನಾ ಗಡಿ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವತ್ತ ಹೆಜ್ಜೆ ಇಟ್ಟಿವೆ. ಎಲ್‌ಎಸಿ ಬಳಿ ಗಸ್ತು ತಿರುಗುವ ಕುರಿತು ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬರಲಾಯಿತು. ಈ ನಿಟ್ಟಿನಲ್ಲಿ ಪೂರ್ವ ಲಡಾಖ್‌ನಲ್ಲಿ

ಈ ರಾಶಿಯವರಿಗೆ ಮದುವೆಯ ಶುಭ ಸೂಚನೆ ಕಾಣುತ್ತಿದೆ,

ಈ ರಾಶಿಯ ಗಂಡ -ಹೆಂಡತಿ ಪುನರ್ಮಿಲನದಿಂದ ಸಂತಸ. ಈ ರಾಶಿಯವರಿಗೆ ಮದುವೆಯ ಶುಭ ಸೂಚನೆ ಕಾಣುತ್ತಿದೆ, ಈ ರಾಶಿಯವರು ಹೊಸ ಉದ್ಯೋಗ ಪ್ರಾರಂಭ. ಗುರುವಾರ- ರಾಶಿ ಭವಿಷ್ಯ ಅಕ್ಟೋಬರ್-31,2024 ನರಕ ಚತುರ್ದಶಿ ಸೂರ್ಯೋದಯ: 06:18,

ಹನುಮಾನ್ ಅವತಾರದಲ್ಲಿ ರಿಷಭ್ ಶೆಟ್ಟಿ : ಹೊಸ ಅವತಾರ ನೋಡಿ ಕರ್ನಾಟಕದ ಫ್ಯಾನ್ಸ್ ಶಾಕ್

ಕಾಂತಾರಾ ಸಿನಿಮಾ ಮಾಡಿ ಇಡೀ ದೇಶದಾದ್ಯಂತ ಹೆಸರುವಾಸಿಯಾದ ರಿಷಬ್ ಶೆಟ್ಟಿ ಹೊಸ ಅವತಾರವೆತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಈಗ ಜೈ ಹನುಮಾನ್ ಆಗಿ ಬರ್ತಿದ್ದಾರೆ. ನಟ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್

error: Content is protected !!