ಮೈಸೂರು: ಇಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಹಬ್ಬಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಮಾಜಿ ಸಿಎಂ ಎಸ್ ಎಂ ಕೃಷ್ಣ ದಸರಾ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಮನುಕುಲಕ್ಕೆ ಬಂದ ಕೊರೊನಾ ಬೇಗ ದೂರ ಆಗ್ಲಿ ಅಂತ ಬಯಸಿದ್ದಾರೆ.
ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಎಸ್ ಎಂ ಕೃಷ್ಣ ಅವರು, ತುಂಬಾ ಸಂತಸವಾಗಿದೆ.. ಯಾವ ಜನ್ಮದ ಪುಣ್ಯವೋ ನನಗೆ ಗೊತ್ತಿಲ್ಲ. ಇಂದು ಇಂಥ ದೊಡ್ಡ ಗೌರವ ಸಿಕ್ಕಿದೆ.. ಇದಕ್ಕಾಗಿ ನಾನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸುತ್ತೇನೆ.
ಚಾಮುಂಡೇಶ್ಚರಿಯಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ. ಈ ಮಹಾಮಾರಿ ಕೊರೊನಾ ಜಗತ್ತಿನಿಂದ ದೂರವಾಗಲಿ.. ನಾನು ಇಲ್ಲೆ ಒಂಟಿಕೊಪ್ಪಲ್ ನಲ್ಲಿ ಓದಿದ್ದೆ. ಮೈಸೂರು ಜೊತೆಯಲ್ಲೇ ನಾನು ಬೆಳೆದಿದ್ದೇನೆ. ಪ್ರತಿದಿನ ಚಾಮುಂಡಿ ತಾಯಿಗೆ ಕೈ ಮುಗಿದೇ ಶಾಲಾ-ಕಾಲೇಜಿಗೆ ಹೋಗ್ತಾ ಇದ್ದೆ.
ಚಿನ್ನದ ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. ನಾನು ಶಾಲಾ ದಿನಗಳಿಂದಲೂ ಅಂಬಾರಿ ಉತ್ಸವ ನೋಡಿದ್ದೇನೆ. ಚಾಮುಂಡಿ ಬೆಟ್ಟಕ್ಕೆ ನಡೆದುಕೊಂಡೆ ಬಂದು ಪೂಜೆ ಸಲ್ಲಿಸಿದ್ದೇನೆ. ನಾವೂ ಸದಾ ಹಿಂದಿನದ್ದನ್ನು ನೆನೆಯಬೇಕು. ಆಗ ಮಾತ್ರ ಮುಂದಿನ ಸ್ಪಷ್ಟವಾಗುತ್ತಾ ಹೋಗುತ್ತೆ ಎಂದು ದಸರಾ ಉದ್ಘಾಟಿಸಿ ನೆರೆದಿದ್ದವರಿಗೆ ಒಂದಷ್ಟು ನುಡಿ ನಮನ ಸಲ್ಲಿಸಿದ್ದಾರೆ.