ಚಿತ್ರದುರ್ಗ, (ಮೇ.09) : ನಾಯಕನಟ್ಟಿ ಹೋಬಳಿಯ ಕೆರೆ ತುಂಬಿಸುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ರೈತರು ಇಲ್ಲಿನ ಭದ್ರ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯಿಂದ ಸುಮಾರು 250 ಕ್ಕೂ ಹೆಚ್ಚು ಬೈಕï ಗಳಲ್ಲಿ ಆಗಮಿಸಿದ್ದ ರೈತರು ನಗರದ ಪ್ರಮುಖ ಬೀದಿಯಲ್ಲಿ ರ್ಯಾಲಿ ನಡೆಸಿ ನಂತರ ಭದ್ರಾ ಮೇಲ್ದಂಡೆ ಕಚೇರಿಗೆ ಮುತ್ತಿಗೆ ಹಾಕಿದರು. ಭದ್ರಾ ಮೇಲ್ದಂಡೆ ಯೋಜನೆ ಕೆಲಕಡೆ ಚುರುಕಿನಿಂದ ಸಾಗಿದರೆ ಮತ್ತೊಂದಿಷ್ಟು ಕಡೆ ತೀರಾ ನಿಧಾನಗತಿಯಲ್ಲಿ ಮುಂದುವರಿದಿದೆ. ಈಗಾಗಲೇ ವಿವಿ ಸಾಗರ ಜಲಾಶಯಕ್ಕೆ ಭದ್ರೆ ಹರಿದು ಬಂದು ರೈತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಆದರೆ ನಾಯಕನಹಟ್ಟಿ ಹೋಬಳಿಯ ಕೆರೆ ತುಂಬಿಸುವ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಈ ಭಾಗದ ರೈತರಲ್ಲಿ ನಿರಾಸೆಯನ್ನುಂಟು ಮಾಡಿದೆ ಎಂದು ರೈತರು ಆರೋಪಿಸಿದರು.
ನಾಯಕನಹಟ್ಟಿ ಹೋಬಳಿಯ ಸುಮಾರು 20 ಕೆರೆಗಳಿಗೆ ನೀರು ತುಂಬಿಸಲು ಜಲಸಂಪನ್ಮೂಲ ಇಲಾಖೆ ಟೆಂಡರ ಕರೆದಿದೆ. ಕೂನಬೇವು, ತುರುವನೂರು, ದೊಡ್ಡಘಟ್ಟ ಮಾರ್ಗವಾಗಿ ಪೈಪï ಲೈನï ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆÀ. ಎರಡು ವರ್ಷಗಳ ಹಿಂದೆ ಪೈಪï ಲೈನï ಅಳವಡಿಸಿವ ಕಾಮಗಾರಿ ಆರಂಭವಾಗಿದ್ದು ಇಷ್ಟೊತ್ತಿಗೆ ಮುಗಿಯಬೇಕಾಗಿತ್ತು. ಕೊರೋನಾ ಕಾಡಿದ ಕಾರಣಕ್ಕೆ ಕಾಮಗಾರಿ ಕುಂಠಿತವಾಗಿತ್ತು. ಈಗ ಎಲ್ಲ ಕಡೆ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿದ್ದರೂ ನಾಯಕನಹಟ್ಟಿ ಹೋಬಳಿಯ ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರನಿಗೆ ನೀಡಲಾದ ನಿಬಂಧನೆ ಮತ್ತು ಗಡುವು ಪ್ರಕಾರ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದು ಸಾಧ್ಯವಾಗದೇ ಹೋಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಐತಿಹಾಸಿಕ ನಾಯಕನಹಟ್ಟಿ ದೊಡ್ಡಕೆರೆ, ಸಣ್ಣ ಕೆರೆ ಬರಗಾಲ ಬಂದು ಅಪ್ಪಳಿಸುವ ಮುನ್ನ ಪ್ರತಿ ವರ್ಷ ತುಂಬುತ್ತಿದ್ದವು. ನಾಯಕನಹಟ್ಟಿ ತಿಪ್ಪೇಶನ ಜಾತ್ರೆ ಬಂದಾಗಲೆಲ್ಲ ತೆಪ್ಪೋತ್ಸವ ನಡೆದು ಈ ಭಾಗದ ಸಾಂಸ್ಕತಿಕ ವೈಭವವ ಮೆರೆಸುತ್ತಿದ್ದವು. ಕೆರೆಯಲ್ಲಿ ನೀರಿದ್ದ ಕಾರಣಕ್ಕೆ ಈ ಭಾಗದಲ್ಲಿ ತೋಟಗಳು ನಳನಳಿಸುತ್ತಿದ್ದವು, ಕುಡಿಯವ ನೀರಿನ ಅಭಾವ ಇರಲಿಲ್ಲ. ಈಗ ಪರಿಸ್ಥಿತಿ ಉಲ್ಟಾ ಆಗಿದ್ದು ತೋಟಗಳು ಒಣಗಿ ಕುಡಿವ ನೀರಿಗೂ ಪರಿತಪಿಸುವಂತಾಗಿದೆ.
ಕಾಮಗಾರಿಗೆ ಎದುರಾಗಿರುವ ಅಡತಡೆಗಳು ರೈತಾಪಿ ಸಮುದಾಯಕ್ಕೆ ಅರ್ಥವಾಗುವುದಿಲ್ಲ. ಜಲಸಂಪನ್ಮೂಲ ಇಲಾಖೆ ಅ„ಕಾರಿಗಳು ಹಾಗೂ ರಾಜ್ಯ ಸರ್ಕಾರ ಕೂಡಲೇ ಸಂಬಂ„ಸಿದ ಗುತ್ತಿಗೆದಾರರ ಬಳಿ ಮಾತನಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ವಿವಿ ಸಾಗರ ಜಲಾಶಯಕ್ಕೆ ನೀರು ಬಂದಿರುವುದರಿಂದ ಐಮಂಗಲ ಹೋಬಳಿ ಹಾಗೂ ಹೊಳಲ್ಕೆರೆ ತಾಲೂಕಿನ ಬಹುತೇಕ ಕಡೆ ಅಂತರ್ಜಲ ಮಟ್ಟ ಮೇಲ್ಬಾಗಕ್ಕೆ ಬಂದಿದೆ. ಈ ದೃಶ್ಯಾವಳಿಗಳ ರೈತರು ಕಣ್ತುಂಬಿಕೊಂಡಿದ್ದಾರೆ.
ನಾಯಕನಹಟ್ಟಿ ಪ್ರಾಂತ್ಯದ ಕೆರೆಗಳು ತುಂಬಿದರೆ ಈ ಭಾಗದ ರೈತರ ಬದುಕು ಹಸನಾಗುತ್ತದೆ . ರಾಜ್ಯ ಸರ್ಕಾರ ತಕ್ಷಣವೇ ಕೆರೆಗೆ ನೀರು ತುಂಬಿಸುವ ಯೋಜನೆ ಚುರುಕುಗೊಳಿಸಿ ಇನ್ನಾರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಕೆರೆಗೆ ನೀರು ತುಂಬಿಸುವ ಕಾಮಗಾರಿ ಚುರುಕುಗೊಳಿಸದಿದದ್ದರೆ ಹೋರಾಟವನ್ನು ಉಗ್ರ ಸ್ವರೂಪಕ್ಕೆ ಕೊಂಡೊಯ್ಯಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಭದ್ರಾ ಮೇಲ್ಡಂಡೆಯಡಿ ಕೆರೆಗಳಿಗೆ ನೀರು ಬರುತ್ತಿರುವುದರಿಂದ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಕೆರೆ ಹೂಳು ಎತ್ತಿಸಿ ಏರಿ ಭದ್ರ ಮಾಡಬೇಕೆಂದು ಜಲಸಂಪನ್ಮೂಲ ಇಲಾಖೆ ಹಾಗೂ ಜಿಲ್ಲಾ„ಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಭದ್ರಾ ಮೇಲ್ದಂಡೆ ಮುಖ್ಯಇಂಜಿನಿಯರ್ ರಾಘವನ್ನು ಕೆಲ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಈಗ ಚುರುಕುಗೊಳಿಸಲಾಗುವುದು. ಈ ಸಂಬಂಧ ಗುತ್ತಿಗೆದಾರರ ಬಳಿ ಮಾತನಾಡಲಾಗಿದೆ ಎಂದರು. ಅ„ೀಕ್ಷಕ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್ ಇದ್ದರು.
ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ಬಾಲರಾಜು, ಹೋರಾಟ ಸಮಿತಿ ಉಪಾಧ್ಯಕ್ಷ ಮಹಂತೇಶ್, ಕಾರ್ಯಾಧ್ಯಕ್ಷ ಬೋರಸ್ವಾಮಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜೆಡಿಎಸ್ ಮುಖಂಡ ಪಟೇಲ್ ಜಿಎಂ ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಪಟೇಲ್ ಜಿ.ತಿಪ್ಪೇಸ್ವಾಮಿ, ಡಿ.ಜಿ.ಗೋವಿಂದಪ್ಪ, ಗೌಡಗೆರೆ ಗ್ರಾಪಂ ಅಧ್ಯಕ್ಷ ಟಿ.ರಾಜಪ್ಪ, ಎನ್.ದೇವರಹಳ್ಳಿ ಗ್ರಾಪಂ ಅಧ್ಯಕ್ಷ ಕಾಟಪ್ಪ, ಸಮಿತಿ ಕಾರ್ಯಾಧ್ಯಕ್ಷ ಟಿ.ಬಸಣ್ಣ, ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ಪ, ಹೆಚ.ಆರ್.ತಿಪ್ಪೇಸ್ವಾಮಿ, ಸಿ.ಮಂಜುನಾಥ್, ಮಹಂತೇಶ್, ಪಾಲಯ್ಯ , ಚಿಕ್ಕಪ್ಪನಹಳ್ಳಿ ಷಣ್ಮುಖ ಉಪಸ್ಥಿತರಿದ್ದರು.