ಬಾಗಲಕೋಟೆ: ನೀವೂ ಕೇಳೋದಕ್ಕೂ ಮುಂಚೆ ಎಲ್ಲವನ್ನು ಮಾಡುತ್ತಿದ್ದೆ. ಈ ಕ್ಷೇತ್ರದ ಮುಖ್ಯಮಂತ್ರಿಯಾಗಿದ್ದಿದ್ದರೆ, ನಮ್ಮ ಸರ್ಕಾರ ಇದ್ದಿದ್ರೆ. ಇಡೀ ರಾಜ್ಯದಲ್ಲಿ ಬಾದಾಮಿ ಮೊದಲ ಸ್ಥಾನದಲ್ಲಿರುತ್ತಿತ್ತು. ಈಗ ಬಿಜೆಪಿ ಸರ್ಕಾರವಿದೆ. ನಾವೆಷ್ಟೇ ಕೂಗಾಟ ಮಾಡಿದ್ರು, ನಮ್ಮ ಮಾತು ಕೇಳಲ್ಲ ಎಂದು ಬಾದಾಮಿ ಜನರಿಗೆ ಹೇಳಿದ್ದಾರೆ.
ನಾನು ಹೇಳಿದ್ದೆಲ್ಲವನ್ನು ಮಾಡ್ತಾರೆ ಅಂತಾನು ಹೇಳೋದಕ್ಕೆ ಆಗಲ್ಲ. ಕೆಲವೊಂದನ್ನು ಅಧಿಕಾರಿಗಳ ಮೂಲಕ ಮಾಡಿಸ್ತೀವಿ, ಇನ್ನು ಕೆಲವು ಕಂಪನಿಗಳ ಮೂಲಕ ಮಾಡಿಸ್ತೀವಿ ಇದು ಬೇರೆ ವಿಚಾರ. ನಮ್ಮದೆ ಸರ್ಕಾರ ಇದ್ದರೆ ಇಲ್ಲಿನ ಅಭಿವೃದ್ಧಿಗೆ ಎಷ್ಟು ಹಣ ಬೇಕೋ ಅಷ್ಟು ಬರುತ್ತಿತ್ತು. ವಿರೋಧ ಪಕ್ಷದಲ್ಲಿ ಇದ್ದುಕೊಂಡೆ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಮಾಡಿದ್ದೇನೆ.
ಮತ್ತೆ ಬಂದ್ರೆ ನೀವೂ ಹೇಳಿದಂತ ಒಂದು ಕೆಲಸವನ್ನು ಬಿಡಲ್ಲ. ನೀವೇನೂ ಹೇಳಲೇಬೇಕಿಲ್ಲ ಎಲ್ಲಾ ಮಾಡಿ ಮುಗಿಸ್ತೀನಿ. ಅದು ನನ್ನ ಜವಾಬ್ದಾರಿ, ಕರ್ತವ್ಯ ಕೂಡ. ಬಾದಾಮಿ ನನ್ನ ಕ್ಷೇತ್ರ. ಅದರಿಂದಾಗಿ ಬಾದಾಮಿಗೆ ವಿಶೇಷವಾದ ಗಮನ ಕೊಡುತ್ತೇನೆ.
ಬಾದಾಮಿಯಿಂದಲೇ ಮುಂದಿನ ಚುನಾವಣೆಗೆ ಸ್ಪರ್ಧಿಸಿ ಸರ್, ಎಂದಾಗ ಸಿದ್ದರಾಮಯ್ಯ ಅವರು, ಇನ್ನು ಒಂದು ವರ್ಷ ಇದ್ಯಪ್ಪ ಚುನಾವಣೆ. ನೋಡೋಣಾ, ಇಲ್ಲಿಂದಲೇ ಸ್ಪರ್ಧಿಸಬೇಕಾ ಅನ್ನೋದನ್ನ. ಬರೀ ಎಂಎಲ್ಎ ನೇ ಆಗಿದ್ರೆ ವಾರಕ್ಕೊಂದ್ ಸಲ ಬಂದು ಇದ್ದು ಹೋಗ್ತಿದ್ದೆ. ಬಾದಾಮಿ ಅಂದ್ರೆ ನಂಗೆ ಅಷ್ಟು ವಿಶೇಷ ಎಂದಿದ್ದಾರೆ.