ಬೆಂಗಳೂರು: ಕಳೆದ ಒಂದು ವಾರದಿಂದಲೂ ರಾಜ್ಯದಲ್ಲಿ ಕೊರೊನಾ ಕೇಸ್ ಗಳು ವಿಪರೀತವಾಗಿ ಹೇರಿಕೆಯಾಗುತ್ತಿವೆ. ಇಂದು ಕೂಡ 4 ಸಾವಿರಕ್ಕೂ ಅಧಿಕ ಕೇಸ್ ಗಳು ದಾಖಲಾಗಿವೆ. ಸದ್ಯ ಸರ್ಕಾರ ಕೊರಿನಾ ನಿಯಂತ್ರಣಕ್ಕೆಂದು ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನವರ ಪಾದಯಾತ್ರೆ ಕಥೆ ಏನು ಅನ್ನೋದೆ ಹಲವರ ಪ್ರಶ್ನೆಯಾಗಿದೆ.
ಈ ಸಂಬಂಧ ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವ ಯೋಚನೆ ಇಲ್ಲ. ಜನರಿಗೆ ಅನುಕೂಲವೂ ಆಗಬೇಕು, ತೊಂದರೆಯೂ ಆಗಬಾರದು ಆ ರೀತಿಯಾಗಿ ಪಾದಯಾತ್ರೆ ಮಾಡ್ತೀವಿ ಎಂದಿದ್ದಾರೆ.
ಇನ್ನು ರಾಜ್ಯ ಸರ್ಕಾರ ಕೊರೊನಾ ರೂಲ್ಸ್ ಜಾರಿಗೆ ತಂದ ಮೇಲೆ ಕಾಂಗ್ರೆಸ್ ಪಾದಯಾತ್ರೆಯನ್ನ ಹತ್ತಿಕ್ಕುವುದಕ್ಕಾಗಿಯೇ ಈ ರೂಲ್ಸ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಬಿಜೆಪಿಯವರಿಗೆ ರಾಜಕಾರಣ ಟಫ್ ಎನಿಸುತ್ತಿದೆ. ಅದಕ್ಕೆ ಈ ರೀತಿಯಾಗಿ ಅಧಿಕಾರಿಗಳ ಜೊತೆ ಬರೆಸುತ್ತಾ ಇದ್ದಾರೆ. ಯಾರ್ಯಾರಿಗೆ ಎಲ್ಲೆಲ್ಲಿ ಕೊರೊನಾ ಆಗಿದೆ ಅಂತ ತಿಳಿಸಿದ್ರೆ, ನಾವೂ ಅಲ್ಲಿ ಹೋಗಿ ಧೈರ್ಯ ಹೇಳಿ ಬರ್ತೇವೆ.
ಇದು ಕೊರೊನಾ ಲಾಕ್ಡೌನ್ ಅಲ್ಲ, ಕೊರೊನಾ ಕರ್ಫ್ಯೂ ಅಲ್ಲ ಬಿಜೆಪಿ ಲಾಕ್ಡೌನ್, ಬಿಜೆಪಿ ಕರ್ಫ್ಯೂ. ಪ್ರತಿಭಟನೆ, ರ್ಯಾಲಿ ಮಾಡಬೇಡಿ ಎಂದಿದ್ದಾರೆ. ಆದ್ರೆ ನಾವೂ ನಡೀತಾ ಇರೋದು ನೀರಿಗಾಗಿ. ಪ್ರತಿಭಟನೆ ಮಾಡಲ್ಲ ಎಂದಿದ್ದಾರೆ.