ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಯೂಸೂಫ್ ಖಾನ್ ಕನ್ನಡ ಭಾಷೆಗೆ ಸಂಬಂಧಿಸಿದಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಅವರ ಪಾಸ್ ಪೋರ್ಟ್ ನೋಡಿದ ಅಧಿಕಾರಿಯೊಬ್ಬರು, ಬೆಂಗಳೂರಿಗರೇ ಎಂದು ಗೊತ್ತಾದ ಮೇಲೆ ಕನ್ನಡದಲ್ಲಿ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಸಲ್ಮಾನ್ ನನಗೆ ಕನ್ನಡ ಬರಲ್ಲ ಅಂತ ಹೇಳಿ, ವಿಡಿಯೋ ಮಾಡಿ, ಆ ಅಧಿಕಾರಿಯ ಮೇಲೆಯೇ ಕೆಂಡಕಾರಿದ್ದಾರೆ.
ಈ ಬಗ್ಗೆ ಆರೋಪ ಮಾಡಿರುವ ಸಲ್ಮಾನ್, ಆ ಅಧಿಕಾರಿ ನನ್ನನ್ನು ಕನ್ನಡದಲ್ಲಿ ಮಾತನಾಡುವಂತೆ ಹೇಳಿದರು. ಈ ಅಧಿಕಾರಿ ಅನಕ್ಷರಸ್ಥ. ಇಂಥ ಅನಕ್ಷರಸ್ಥರಿಂದಾನೇ ದೇಶ ಉದ್ಧಾರ ಆಗ್ತಾ ಇಲ್ಲ. ಹುಟ್ಟಿರುವುದು ಬೆಂಗಳೂರಿನಲ್ಲಿ, ನಿಮ್ಮ ತಂದೆ ಹುಟ್ಟಿರುವುದು ಬೆಂಗಳೂರಿನಲ್ಲಿ ಕನ್ನಡ ಬರುವುದಿಲ್ಲವಾ ಎಂದರೆ ಹೇಗೆ..? ಎಂದು ಆ ಅಧಿಕಾರಿ ಪ್ರಶ್ನಿಸಿದರು. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ ಮಾತ್ರ. ಬೆಳೆದಿದ್ದು ಸೌದಿಯಲ್ಲಿ ಹಾಗಾಗಿ ಕನ್ನಡ ಕಲಿತಿಲ್ಲ.
https://www.instagram.com/tv/CpyKFXEBHWm/?igshid=YmMyMTA2M2Y=
ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಲೇಬೇಕೆಂಬ ನಿಯಮವಿದೆಯೇ. ನಾನು ಬೆಂಗಳೂರಿನವನೇ. ಆದರೆ ವಿಶ್ವದ ನಾನಾ ಕಡೆ ಟ್ರಾವೆಲ್ ಮಾಡುವ ಹಕ್ಕು ನನಗಿದೆ. ನಮ್ಮ ಮಾತೃಭಾಷೆ ಹಿಂದಿ. ಆ ಭಾಷೆ ನನಗೆ ಬರುತ್ತದೆ. ಪ್ರಧಾನಿ ಮೋದಿಜೀಗೆ ಕನ್ನಡ ಮಾತನಾಡಲು ಬರುತ್ತದೆಯೇ ಎಂದು ಪ್ರಶ್ನಿಸಿದ್ದಾನೆ.