ಬೆಂಗಳೂರು; ಇತ್ತೀಚೆಗಂತೂ ಕೊಲೆ ಕೇಸದ ಗಳನ್ನೇ ಹೆಚ್ಚಾಗಿಕೇಳ್ತಾ ಇದ್ದೀವಿ. ಅದರಲ್ಲೂಈ ರೀತಿಯ ಕೊಲೆಗಳು ಕೂಡ ಜಾಸ್ತಿ ಆಗ್ತಾ ಇದಾವೆ. ಇಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದ ಕೊಲೆಯೊಂದು ಭಯ ಹುಟ್ಟಿಸಿದೆ. ಗಂಡನೇ ಹೆಂಡತಿಯ ದೇಹವನ್ನು ಕತ್ತರಿಸಿ, ಸೂಟ್ ಕೇಸ್ ನಲ್ಲಿ ಪ್ಯಾಕ್ ಮಾಡಿದ್ದಂತ ಘಟನೆ ಹುಳಿಮಾವು ಸಮೀಪದ ಕಮ್ಮನಹಳ್ಳಿಯಲ್ಲಿ ನಡೆದಿದೆ.
ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ಮೂಲತಃ ಮಹಾರಾಷ್ಟ್ರದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಗಂಡ ಹೆಂಡತಿ ಇಬ್ಬರಿಗೂ ವರ್ಕ್ ಫ್ರಮ್ ಹೋಂ ಇತ್ತಂತೆ. ಹೀಗೆ ಯಾವುದೋ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತುಗಳು ಅತಿರೇಕಕ್ಕೆ ಹೋಗಿ, ಗಂಡ ರಾಕೇಶ್ ತನ್ನ ಹೆಂಡತಿ ಗೌರಿಯನ್ನು ಕೊಂದಿದ್ದಾನೆ. ಅದರಲ್ಲೂ ಪೀಸ್ ಪೀಸ್ ಮಾಡಿ, ಸೂಟ್ ಕೇಸ್ ಗೆ ತುಂಬಿದ್ದಾನೆ. ಅಂದ್ರೆ ಅರ್ಥ ಮಾಡಿಕೊಳ್ಳಿ ಈ ಜಗಳ ಎಷ್ಟು ದೊಡ್ಡ ಮಟ್ಟಕ್ಕೆ ಹೋಗಿದೆ ಎಂಬುದನ್ನು. ಬಳಿಕ ಗೌರಿಯ ಪೋಷಕರಿಗೆ ಕರೆ ಮಾಡಿ, ತಾನೂ ಮಾಡಿರುವ ಘನಂದಾರಿ ಕೆಲಸವನ್ನ ತಿಳಿಸಿದ್ದಾನೆ. ಗೌರಿ ಮನೆಯವರು ಆತಂಕಗೊಂಡು, ತಕ್ಷಣ ಮಹಾರಾಷ್ಟ್ರ ಪೊಲೀಸರ ಮೊರೆ ಹೋಗಿದ್ದಾರೆ.
ಪೊಲೀಸರಿಗೆ ತಮ್ಮ ಅಳಿಯ ಹೇಳಿದ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರು ತಕ್ಷಣವೇ ಬೆಂಗಳೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬೆಂಗಳೂರಿನ ಹುಳಿಮಾವು ಪೊಲೀಸರು ಅಲರ್ಟ್ ಆಗಿದ್ದು, ದೊಡ್ಡಕಮ್ಮನಹಳ್ಳಿಯ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ಸಾರಾ ಫಾತಿಮಾ ಅವರ ತಂಡ ಘಟನೆಯ ತನಿಖೆಯನ್ನು ಕೈಗೊಂಡಿದ್ದಾರೆ.
ಬೆಂಗಳೂರು; ಮಕ್ಕಳೆಂದರೆ ಯಾವ ಪೋಷಕರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದ ಮೇಲೆ ಅವರ ಉಜ್ವಲ ಭವಿಷ್ಯಕ್ಕಾಗಿಯೇ ಹೋರಾಡುತ್ತಾರೆ. ಅವರ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಸಂಭ್ರಮದಿಂದ ಆಚರಿಸಲಾಯಿತು.…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಮಾರ್ಚ್…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿಶೇಷವಾದ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್…