ಬೆಂಗಳೂರು: ಆರ್‌ಎಸ್‌ಎಸ್ ನಿಷೇಧಿಸಲು ಹಲವಾರು ನಾಯಕರು ಪ್ರಯತ್ನಪಟ್ಟರು. ಆದರೆ, ಅವರು ಯಶಸ್ವಿಯಾಗಲಿಲ್ಲ ಎಂದು ಕೇಂದ್ರ ಸಚಿವ ಶೋಭ ಕರಂದ್ಲಾಜೆ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು
ಆರ್‌ಎಸ್‌ಎಸ್ ಒಂದು ರಾಷ್ಟ್ರೀಯ ಸಂಘಟನೆ, ದೇಶಭಕ್ತ ಸಂಘಟನೆ. ಆರ್‌ಎಸ್‌ಎಸ್ ಮೇಲೆ ದೇಶದ್ರೋಹದ ಆರೋಪ ಇಲ್ಲ. ದೇಶಭಕ್ತಿಯನ್ನು ಹೆಚ್ಚಿಸುವ ಕೆಲಸ, ಯುವಕರನ್ನು ಈ ಮಾದರಿಯಲ್ಲಿ ತಯಾರು ಮಾಡುವ ಒಂದು ಸಂಘಟನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕಂದ್ಲಾಜೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕು. ತಿಳಿದು ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಸತ್ಯ ತಿಳಿದುಕೊಂಡು ನಂತರ ಮಾತನಾಡಲಿ ಎಂದು ಹೇಳಿದರು. ಆರ್‌ಎಸ್‌ಎಸ್ ಸಂಘ ದೇಶದ್ರೋಹ ಮಾಡಿಲ್ಲ, ಗಡಿಯಲ್ಲಿ ಅಥವಾ ದೇಶದಲ್ಲಿ ದ್ರೋಹ ಮಾಡಿದ ಉದಾಹರಣೆ ಇಲ್ಲ. ದೇಶದ ಜನ, ಸುಪ್ರೀಂಕೋರ್ಟ್ ಸಂಘಟನೆಯನ್ನು ಒಪ್ಪಿಕೊಂಡಿದ್ದಾರೆ. ಒಳ್ಳೆ ಕೆಲಸ ಮಾಡುವವರಿಗೆ ವಿರೋಧ ಬರುವುದು ನಿಜ.
ಕುರ್ಚಿಯ ಆಸೆಗಾಗಿ ಮಾತನಾಡಿದರೆ ಉತ್ತರ ಹೇಳಲ್ಲ. ದೇಶದ ಬಗ್ಗೆ ಕೆಲಸ ಮಾಡಿದರೆ ವಿರೋಧ ಬರುವುದು ನಿಜ.ಇದು ಮಣ್ಣಿನ ಗುಣವೂ ಹೌದು. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಪುರಾಣ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಕ್ಷುಲ್ಲಕ ಹೇಳಿಕೆ ಕೊಡುವವರಿಗೆ ಉತ್ತರ ನೀಡಲು ಆಗಲ್ಲ. ಬುದ್ಧಿವಂತರು ಯುಪಿಎಸ್‌ಸಿ ಸೇರಿದರೆ ದೇಶ ದ್ರೋಹ ಹೇಗೆ ಆಗುತ್ತದೆ. ಬುದ್ಧಿವಂತರು ಆರ್‌ಎಸ್‌ಎಸ್‌ಗೆ ಬರಬಾರದು ಎಂದಿಲ್ಲ. ಮೊದಲು ಅವರು ಆರ್‌ಎಸ್‌ಎಸ್ ಬಗ್ಗೆ ಅಧ್ಯಯನ ಮಾಡಬೇಕು ಎಂದರು.