ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಅನೌನ್ಸ್ ಆಗಿದೆ. ಆದ್ರೆ ಕೊರೊನಾ ಹೆಚ್ಚಳದ ಹಿನ್ನೆಲೆ ಯಾವುದೇ ಥರದ ರ್ಯಾಲಿ, ಅಬ್ಬರದ ಪ್ರಚಾರಕ್ಕೆ ಅನುಮತಿ ನೀಡಿಲ್ಲ. ಈ ಬಾರಿ ಗೋವಾ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಅಂತ ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಶಿವಸೇನಾ, ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಉತ್ತರ ಪ್ರದೇಶ ಹಾಗೂ ಗೋವಾ ರಾಜ್ಯದಲ್ಲಿ ಶಿವಸೇನೆ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧಿಸಲಿದೆ. ಕಾಂಗ್ರೆಸ್ ಕೂಡ ನಮ್ಮ ಜೊತೆಗಿರಲು ನಾವೂ ಇಚ್ಛಿಸುತ್ತೇವೆ. ಸ್ವಂತ ಬಲದಿಂದಲೇ ಗೆಲ್ಲುತ್ತೇವೆಂದು ಕಾಂಗ್ರೆಸ್ ಅಂದುಕೊಂಡರೆ ಅದಕ್ಕೂ ನಮ್ಮ ಹಾರೈಕೆ ಇರುತ್ತೆ. ಆದ್ರೆ ಈ ಬಾರಿ ಗೋವಾದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕೊರೋನಾ ಹೆಚ್ಚಳದ ಹಿನ್ನೆಲೆ ಯಾವುದೇ ರ್ಯಾಲಿ, ಅದ್ದೂರಿ ಪ್ರಚಾರಗಳಿಗೆ ಚುನವಣಾ ಆಯೋಗ ಅನುಮತಿ ನೀಡಿಲ್ಲದೆ ಇರುವ ಬಗ್ಗೆ ಮಾತನಾಡಿದ ಸಂಜಯ್ ರಾವುತ್, ಪ್ರಚಾರಕ್ಕೆ ನಿರ್ಬಂಧ ಹೇರಿರುವುದು ಎಲ್ಲರಿಗೂ ಅನ್ವಯಿಸಬೇಕು. ಇದಕ್ಕೆ ಮೋದಿಯವರು ಕೂಡ ಮಾದರಿಯಾಗಬೇಕು ಎಂದಿದ್ದಾರೆ.