ಹೊಸದಿಲ್ಲಿ: ಇಂದು ದೇಶದೆಲ್ಲೆಡೆ ಈದ್ ಹಬ್ಬ ಆಚರಣೆ ಮಾಡಲಾಗಿದೆ. ಈ ಹಿನ್ನೆಲೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಅವರ ಪುತ್ರ ಅಬ್ರಾಮ್ ಖಾನ್ ಗೆ ಶುಭ ಹಾರೈಸಲು ಅಭಿಮಾನಿಗಳು ಮುಂಬೈನ ನಿವಾಸ ಮನ್ನತ್‌ನ ಮುಂದೆ ಜಮಾಯಿಸಿದ್ದರು. ಶಾರೂಕ್ ಮತ್ತು ಅವರ ಪುತ್ರ ಹೊರಗೆ ಜಮಾಯಿಸಿದ ಅಭಿಮಾನಿಗಳಿಗೆ ಶುಭಾಶಯ ಕೋರಿದರು.
ಶಾರುಖ್ ಮತ್ತು ಅಬ್ರಾಮ್ ಮನ್ನತ್‌ನ ಕಬ್ಬಿಣದ ಬಾಲ್ಕನಿಯಲ್ಲಿ ಅಭಿಮಾನಿಗಳತ್ತ ಕೈ ಬೀಸಿದ್ದಯ ಕಂಡು ಬಂದಿದೆ. SRK ಬಿಳಿ ಟೀ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದರೆ, ಅಬ್ರಾಮ್ ಕೆಂಪು ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಶಾರುಖ್ ಮತ್ತು ಅಬ್ರಾಮ್ ಇಬ್ಬರೂ ಮನ್ನತ್ ಹೊರಗೆ ನಿಂತಿದ್ದ ಅಭಿಮಾನಿಗಳತ್ತ ಕೈ ಬೀಸಿ ಶುಭಾಶಯ ಕೋರಿದರು. ಜೊತೆಗೆ ಅಭಿಮಾನಿಗಳಿಗತ್ತ ಮುತ್ತನ್ನು ನೀಡಿದ್ದಾರೆ.
ಈ ಫೋಟೋಗಳನ್ನು ಗಮನಿಸಿದ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಇನ್ನು ಕೆಲವು ಪೋಸ್ಟ್‌ಗಳನ್ನು ಹಾಕಿದ್ದಾರೆ. ಬಹುದಿನಗಳ ನಂತರ ಕಿಂಗ್ ಖಾನ್ ಬೆಳ್ಳಿತೆರೆಗೆ ಮರಳಲು ಕಾತರದಿಂದ ಕಾಯುತ್ತಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಝೀರೋ ಸಿನಿಮಾದಲ್ಲಿ ಶಾರೂಖ್ ಖಾನ್ ಗೆ ಹೇಳಿಕೊಳ್ಳುವಂತ ಯಶಸ್ಸು ಸಿಗಲೇ ಇಲ್ಲ. ಇದೀಗ ಮುಂಬರುವ ಪಠಾಣ್ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಟ್ಲಿ ಕುಮಾರ್ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ನಯನತಾರಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ವೈಆರ್‌ಎಫ್‌ನ ‘ಪಠಾನ್’ ಮತ್ತು ತಾಪ್ಸಿ ಪನ್ನು ಜೊತೆ ರಾಜ್‌ಕುಮಾರ್ ಹಿರಾನಿ ಅವರ ವಲಸೆ ನಾಟಕ ‘ಡುಂಕಿ’ ಯಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ.