ಚಿತ್ರದುರ್ಗ, (ಮೇ.17): ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮೇ.20 ರಿಂದ 22 ರವರೆಗೆ ಗುರುಭಿಕ್ಷಾ ವಂದನ ಹಾಗೂ ಶತ ಚಂಡಿಕಾಯಾಗ ನಡೆಯಲಿದೆ.
20 ರಂದು ಬೆಳಿಗ್ಗೆ 7-30 ಕ್ಕೆ ಮಂಗಲ ಪ್ರಾರ್ಥನೆ, ಗುರುವೃದ್ದರ ಆಶೀರ್ವಾದ ಸ್ವೀಕಾರ, ಯಾಗ ಶಾಲಾ ಪ್ರವೇಶ, ಮಂಟಪ ಸಂಸ್ಕಾರ, ಮಹಾಗಣಪತಿ ಪೂಜಾ, ಪುಣ್ಯಾಹ, ಅಧಿಕಾರ ಕೃಚ್ಪ್ರಾಚರಣ, ನಾಂದಿ, ಕುಲದೇವತಾ ಸ್ಥಾಪನಾ, ಮಾತೃಕಾ ಪೂಜಾ, ಋತ್ವಿಗ್ವರಣೆ, ಮಧುಪರ್ಕ, ಪ್ರಧಾನ ಸಂಕಲ್ಪ, ಕಲಶ ಸ್ಥಾಪನೆ, ಪಂಚಗವ್ಯಹವನ, ನವಗ್ರಹ ಹೋಮ, ಅಷ್ಟದ್ರವ್ಯ, ಗಣಹವನ ಮತ್ತು ತೀರ್ಥಪ್ರಸಾದ ವಿತರಣೆ.
ಸಂಜೆ 5-30 ಕ್ಕೆ ಶತರುದ್ರ ಪಾರಾಯಣ, ಲಕ್ಷ್ಮಿನಾರಾಯಣ ಹೃದಯ ಪಾರಾಯಣ, ದೇವರಿಗೆ ಕಲ್ಪಾವೃದ್ದಿ ಹವನ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಚಂಡೀಪಾರಾಯಣ, ನವಾಕ್ಷರಿ ಜಪ.
ಸಂಜೆ ಆರು ಗಂಟೆಗೆ ಉಡುಪಿಯ ಮಧ್ವಾಚಾರ್ಯ ಮಹಾಸಂಸ್ಥಾನ, ಪೇಜಾವರ ಅಧೋಕ್ಷಜಮಠದ ವಿಶ್ವಪ್ರಸನ್ನ ತೀರ್ಥಸ್ವಾಮಿಗಳ ಆಗಮನ, ಧೂಳಿ ಪಾದಪೂಜೆ.
21 ರಂದು ಬೆಳಿಗ್ಗೆ 7-30 ಕ್ಕೆ ಲಕ್ಷ್ಮಿನಾರಾಯಣ ಹೃದಯ ಹವನ, ಲಘು ರುದ್ರ ಹವನ, ಸೌರ ಹೋಮ, ಆಶೀರ್ವಚನ, ಪೂರ್ಣಾಹುತಿ, ತೀರ್ಥಪ್ರಸಾದ ವಿತರಣೆ.
ವಿಶ್ವಪ್ರಸನ್ನ ಸ್ವಾಮಿಗಳ ದಿವ್ಯ ಸಾನಿಧ್ಯ.
ಸಂಜೆ 5-30 ಕ್ಕೆ ಚಂಡೀಪಾರಾಯಣ, ನವಾಕ್ಷರಿ ಜಪ, ರಾಜೋಪಚಾರ ಪೂಜೆ, ಮಹಾ ಮಂಗಳಾರತಿ ನಂತರ ತೀರ್ಥಪ್ರಸಾದ.
22 ರಂದು ಬೆಳಿಗ್ಗೆ 6-30 ಕ್ಕೆ ಶತಚಂಡಿಕಾ ಹವನ, 10-30 ಕ್ಕೆ ಮಹಾಪೂರ್ಣಾಹುತಿ, 11-30 ಕ್ಕೆ ಧರ್ಮಸಭೆ ಕಾರ್ಯಕ್ರಮ.
ಹರಿಹರಪುರದ ಶಾರದಾ ಲಕ್ಷ್ಮಿನರಸಿಂಹ ಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್, ಶಾಸಕರುಗಳಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಇವರುಗಳು ಆಗಮಿಸಲಿದ್ದಾರೆ.
ನಂತರ ತೀರ್ಥಪ್ರಸಾದ, ರಾಷ್ಟ್ರಾಶೀರ್ವಾದ ಮಂಗಲ, ಅನ್ನಸಂತರ್ಪಣೆಯಿರುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಭಟ್, ಕಾರ್ಯದರ್ಶಿ ಅನಂತ್‍ಭಟ್ ಇವರುಗಳು ವಿನಂತಿಸಿದ್ದಾರೆ.