ಚಳ್ಳಕೆರೆ : ತಾಲೂಕಿನ ಬೆಳೆಗೆರೆ ಗ್ರಾಮದ ಹೊರವಲಯದಲ್ಲಿರುವ ಬಿ. ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬೆಳಗೆರೆ ಬಿ ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 51 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಪಾಸಾಗಿದ್ದು ಶೇಕಡಾ 100 ಕ್ಕೆ 61.%ರಷ್ಟು ಫಲಿತಾಂಶ ಲಭಿಸಿದ್ದು .11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದರೆ ಇನ್ನೂ ದ್ವಿತೀಯ ದರ್ಜೆ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ 14. ತೃತೀಯ ದರ್ಜೆ -6 ವಿದ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ಮಹಾಲಕ್ಷ್ಮಿ ಎಸ್.600 ಅಂಕಗಳಿಗೆ 505 ಶೇ. 84 ಉತ್ತಮ ಅಂಕ ಪಡೆದಿದ್ದಾರೆ.
ಚೈತ್ರ. ಟಿ.600 .ಕ್ಕೆ 482 ಅಂಕ ಗಳಿಸಿದದ್ದು ಯಶೋಧ. ಕೆ. 600ಕ್ಕೆ 470 ಅಂಕ ಪಡೆದು ಕಾಲೇಜಿ ಕೀರ್ತಿ ತಂದಿದ್ದಾರೆ.
ಈ ಮೂರು ವಿದ್ಯಾರ್ಥಿಗಳು ಗೊರ್ಲತ್ತಿನ ಗ್ರಾಮದವರಾಗಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಸಂಸ್ಥೆಯ ಕಾರ್ಯದರ್ಶಿ ಎಸ್. ರಾಮಕೃಷ್ಣ ಹಾಗೂ ಪ್ರಾಂಶುಪಾಲ ಆರ್.ಸರೋಜಮ್ಮ ಆಡಳಿತ ಮಂಡಳಿಯವರು ಅಭಿನಂದಿಸಿರುತ್ತಾರೆ.