ಚೆನ್ನೈ: ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ ನಟರಾಜ್ ಇವತ್ತು ಜಯಲಲಿತಾ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಹೂ ಮಾಲೆ ಹಾಕಿ ನಮಸ್ಕರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಶಶಿಕಲಾ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.
ಅಕ್ಟೋಬರ್ 17ಕ್ಕೆ ಅಂದ್ರೆ ನಾಳೆಗೆ ಅಣ್ಣಾ ಡಿಎಂಕೆ ಪಕ್ಷ ಸ್ಥಾಪನೆಯಾಗಿ ಭರ್ತಿ 50 ವರ್ಷ ತುಂಬುತ್ತೆ. ಈ ಶುಭದಿನದಂದೇ ಶಶಿಕಲಾ ಅಖಾಡಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ. ಅವರ ನಡವಳಿಕೆ.
ಜಯಲಲಿತಾ ಇದ್ದಾಗ ಅಣ್ಣಾ ಡಿಎಂಕೆ ಪಕ್ಷಕ್ಕೆ ಸೋಲೆಂಬುದೇ ಇರಲಿಲ್ಲ.. ಆದ್ರೆ ಜಯಲಲಿತಾ ನಿಧನದ ಬಳಿಕ ಮೊದಲ ಬಾರಿಗೆ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿತ್ತು. ಹೀಗಾಗಿ ಪಕ್ಷವನ್ನ ಬಲವರ್ಧಬೆಗೊಳಿಸಲು ಚಿನ್ನಮ್ಮನೇ ನೇರವಾಗಿ ರಾಜಕೀಯ ಪ್ರವೇಶಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಶಶಿಕಲಾ ನಾಲ್ಕು ವರ್ಷ ಜೈಲಿನಲ್ಲೇ ಇದ್ದರು. ನಾಲ್ಕು ವರ್ಷಗಳ ಸೆರೆವಾಸದಿಂದ ಮುಕ್ತಿ ಹೊಂದಿದ್ದಾರೆ. ಈಗ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾಗಲು ತಯಾರಿ ನಡೆಸುತ್ತಿದ್ದು, ಇವತ್ತು ಜಯಲಲಿತಾ ಸಮಾಧಿಗೆ ಪೂಜೆ ಸಲ್ಲಿಸಿರೋದೇ ಇದಕ್ಕೆ ಬುನಾದಿ ಎಂಬಂತಿದೆ.