ಚಳ್ಳಕೆರೆ, (ಏ.20) : ಸಕಾಲ ಸೇವೆ ಸಾರ್ವಜನಿಕರಿಗೆ ವರದಾನವಾಗಿದ್ದು ಈ ಸೇವೆಯ ಎಲ್ಲಾ ಸವಲತ್ತುಗಳನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಶಾಸಕ ಟಿ ರಘುಮೂರ್ತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಸಕಾಲ ದಶಮಾನೋತ್ಸವ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರದ ಸಕಾಲ ಅಧಿನಿಯಮ ಅನುಷ್ಠಾನಕ್ಕೆ ಬಂದಿದ್ದು ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕರು ವಿವಿಧ ಇಲಾಖೆಯ 150ಕ್ಕೂ ಹೆಚ್ಚು ಸೇವೆಗಳನ್ನು ನಿಗಧಿತ ಅವಧಿಯೊಳಗೆ ಪಡೆದಿರುವುದು ನಿಜಕ್ಕೂ ಗ್ರಾಮಾಂತರ ಪ್ರದೇಶದ ಜನರಿಗೆ ಕಿರಿಕಿರಿ ತಪ್ಪಿಸಿದ ಸರ್ಕಾರಿ ಅಧಿಕಾರಿಗಳು ಸೇವೆಯನ್ನು ಪ್ರಾಮಾಣಿಕವಾಗಿ ಮುಂದೆಯೂ ಸಾರ್ವಜನಿಕರಿಗೆ ಒದಗಿಸುವಂತಾಗಬೇಕು ಎಂದರು.
ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ, ಕಳೆದ ಹತ್ತು ವರ್ಷಗಳಲ್ಲಿ ಈ ಯೋಜನೆಯಿಂದ ರೈತರ ಮತ್ತು ಸಾರ್ವಜನಿಕರ ಬದುಕು ಹಸನಾಗಿದೆ. ಹತ್ತು ವರ್ಷಕ್ಕೂ ಪೂರ್ವದಲ್ಲಿ ವಿವಿಧ ಸೇವೆಗಳ ಹರಸಿ ಬರುವಂತಹ ಸಾರ್ವಜನಿಕರ ಅರ್ಜಿಗಳ ಲೆಕ್ಕ ಪತ್ರವೇ ಇರುತ್ತಿರಲಿಲ್ಲ. ಸಕಾಲದಡಿ ನೀಡುವಂತಹ ಅರ್ಜಿಗಳಿಗೆ ಕಾಲಮಿತಿ ಮತ್ತು ಅರ್ಜಿಗಳ ಪರಿಮಾಣದ ಬಗ್ಗೆ ಲೆಕ್ಕ ವಿರುತ್ತದೆ. ಕಾಲಮಿತಿಯೊಳಗೆ ವಿಲೇವಾರಿ ಮಾಡದ ಅಧಿಕಾರಿ-ನೌಕರರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಬಹುದು. ಆದರೆ ಚಳ್ಳಕೆರೆ ತಾಲೂಕಿನಲ್ಲಿ ಈಗಿರುವ ಸಕಾಲದ ಕಾಲಮಿತಿಯನ್ನು 21ದಿನಗಳಿಂದ 5 ದಿನಕ್ಕೆ ಕಡಿಮೆ ಮಾಡಿ ಸಾರ್ವಜನಿಕರಿಗೆ ಆಗುವಂತಹ ಕಿರಿಕಿರಿ ತಪ್ಪಿಸಲಾಗಿದೆ. ತಾಲೂಕಿನ ಎಲ್ಲ ಜನತೆಯು ಈ ಯೋಜನೆಯ ಉಪಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಇದಕ್ಕೂ ಪೂರ್ವದಲ್ಲಿ ತಾಲೂಕು ಕಚೇರಿ ಯಿಂದ ವಿವಿಧ ಕಲಾತಂಡಗಳೊಂದಿಗೆ ಸಕಾಲ ದಶಮಾನೋತ್ಸವ ಜಾಥಾ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಜಾತ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಹಾಜರಿದ್ದರು.
ಚಿತ್ರದುರ್ಗ: ಚಿರತೆಗಳು ಕಾಡಿನಿಂದ ನಾಡಿಗೆ ಆಗಾಗ ಎಂಟ್ರಿ ಆಗ್ತಾನೆ ಇರ್ತಾವೆ. ಅಲ್ಲಲ್ಲಿ ಪ್ರತ್ಯಕ್ಷಗೊಂಡು ಜನರಿಗೆ ಆತಂಕ ತಂದು ಇಡುತ್ತಾ ಇರುತ್ತವೆ.…
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಇಂಡೋ ಫಾರ್ಮ್ ಟ್ರಾಕ್ಟರ್ ನ ನೂತನ ಶೋರೂಂ ಶಿವಾಂಶ್ ಟ್ರಾಕ್ಟರ್ ನಗರದ ಆರ್.ಟಿ.ಒ…
ನವದೆಹಲಿ: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ನಾಳೆ ಸಚಿವೆ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನ ಅಧಿವೇಶನ…
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…