ಚಿತ್ರದುರ್ಗ, (ಜು.19) : ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಈವೆಂಟ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ ವತಿಯಿಂದ ಎಸ್.ಜೆ.ಎಂ. ಕ್ವೀನ್ಸ್ ರೆಸಾರ್ಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಸಿಲ್ವರ್ ಸರ್ವೀಸ್, ಸೌತ್‍ಇಂಡಿಯನ್ ಫುಡ್ ಸರ್ವೀಸ್, ಅಮೆರಿಕನ್ ಸರ್ವೀಸ್, ಬಫೆಟ್ ಸರ್ವೀಸ್ ಸಿಸ್ಟಂ, ಟ್ರೇ ಸರ್ವೀಸ್ ಮತ್ತು ಫ್ರೆಂಚ್ ಸರ್ವೀಸ್ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಚಾಟ್ಸ್, ಬರ್ಗರ್, ಜ್ಯೂಸ್, ಚಾಕಲೇಟ್, ಹೋಳಿಗೆ-ಸೀಕರಣೆ, ಕೋಸಂಬರಿ, ಪಲ್ಯ, ಚಪಾತಿ, ಬದನೆಕಾಯಿ ಹೆಣಗಾಯಿ, ಪಲಾವ್, ರೈಸ್‍ಬಾತ್ ಹೀಗೆ ನಾನಾ ವಿಧದ ಆಹಾರಖಾದ್ಯಗಳನ್ನು ತಯಾರಿಸಿ ತಂದು ಪ್ರತಿ ರೆಸಾರ್ಟ್‍ನವರು ಒಂದೊಂದು ರೀತಿಯಲ್ಲಿ ಅತಿಥಿಗಳನ್ನು ಸ್ವಾಗತಿಸಿ ಆತಿಥ್ಯ ನೀಡಿದರು. ನಂತರ ಇವರ ಆತಿಥ್ಯವನ್ನು ಸ್ವೀಕರಿಸಿ ಕಾಲೇಜಿನ ಮುಖ್ಯಸ್ಥರು ಬಹುಮಾನ ವಿತರಿಸಿದರು.
ಬಫೆಟ್ ತಂಡಕ್ಕೆ (ಡಿ. ನಾಗಮಣಿ, ಭೂಮಿಕ ಡಿ., ರಶ್ಮಿ ಬಿ.ಟಿ.)-ಮೊದಲ ಬಹುಮಾನ, ಸೌತ್ ಇಂಡಿಯನ್ ಫುಡ್ ಸಿಸ್ಟಂ ತಂಡಕ್ಕೆ (ಅರ್ಚನ, ರಕ್ಷಿತ ಮತ್ತು ಪಲ್ಲವಿ ಡಿ.ಸಿ.)-ದ್ವಿತೀಯ ಬಹುಮಾನ, ಸಿಲ್ವರ್ ಸರ್ವೀಸ್ ತಂಡಕ್ಕೆ (ಸೈಯದಾಫಾತಿಮಾ, ಇಸ್ರಾರ್‍ಬಾನು ಮತ್ತು ಸುಪ್ರಿತಾ)-ಮೂರನೆಯ ಬಹುಮಾನ ಪಡೆದುಕೊಂಡವು. ಉಳಿದಂತೆ ಮೂರು ತಂಡಗಳಿಗೆ ಸಮಾಧಾನಕರ ಬಹುಮಾನ ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಐಕ್ಯೂಎಸಿ ಕೋಆರ್ಡಿನೇಟರ್ ಎನ್. ಚಲುವರಾಜು, ಉಪನ್ಯಾಸಕರಾದ ಕುಮಾರ್, ರಮ್ಯ, ಶ್ವೇತ, ಉಷಾ, ವಸಂತಕುಮಾರಿ, ಗಜೇಂದ್ರ ಮಿಸ್‍ಬಾ ಮೊದಲಾದವರಿದ್ದರು.
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…