ಉಕ್ರೇನ್ ಮೇಲೆ ರಷ್ಯಾ ಸಮರ ಇಂದಿಗೆ ಐದು ದಿನ ಕಳೆದಿದೆ. ಸಾಕಷ್ಟು ಜನರ ಸಾವು ನೋವಾಗಿದೆ. ಸಾಕಷ್ಟು ನಷ್ಟವಂತು ಆಗಿದೆ. ಆದ್ರೆ ಈ ಯುದ್ಧದ ಭೀತಿಯಲ್ಲಿ ಬೇರೆ ಬೇರೆ ದೇಶಗಳು ಯೋಚಿಸೋದು, ಆ ಎರಡು ರಾಷ್ಟ್ರದಲ್ಲಿರುವ ನಮ್ಮವರನ್ನ ಸುರಕ್ಷಿತವಾಗಿ ಕರೆತರಬೇಕು ಎಂದು.
ಯುದ್ಧ ಶುರುವಾದಾಗಿನಿಂದಲೂ ಎಲ್ಲಾ ದೇಶದವರು ಕೂಡ ವಿಶೇಷ ವಿಮಾನದ ವ್ಯವಸ್ಥೆ ಮಾಡಿ, ತಮ್ಮವರನ್ನ ಸುರಕ್ಷಿತವಾಗಿ ಕರೆ ತರುತ್ತಿದ್ದಾರೆ. ಭಾರತ ಕೂಡ ಈಗಾಗಲೇ 1,500ಕ್ಕೂ ಹೆಚ್ಚು ಕನ್ನಡಿಗರನ್ನ ಉಕ್ರೇನ್ ನಿಂದ ಕರೆ ತಂದಿದೆ. ಆದ್ರೆ ರಷ್ಯಾ 27 ರಾಷ್ಟ್ರಗಳ ವಿಮಾನಕ್ಕೆ ತಡೆ ನೀಡಿದೆ.
ತನ್ನ ದೇಶದ ಮೇಲೆ ಇನ್ನೆಲ್ಲಿ ವೈಮಾನಿಕ ದಾಳಿ ನಡೆಯುತ್ತೋ ಎಂಬ ಕಾರಣಕ್ಕೆ ರಷ್ಯಾ ಈ ರೀತಿಯ ನಿರ್ಧಾರ ಕೈಗೊಂಡಿದೆ. 27 ರಾಷ್ಟ್ರಗಳ ವಾಯುಪ್ರದೇಶ ಬಂದ್ ಮಾಡಿದೆ. ತನ್ನ ದೇಶದ ಭದ್ರತೆಗಾಗಿ ಈ ರೀತಿಯ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.