ಚಿತ್ರದುರ್ಗ,(ಜೂನ್.13) : ಚಿತ್ರದುರ್ಗ ಬೆಸ್ಕಾಂ ಗ್ರಾಮೀಣ ಉಪವಿಭಾಗದ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳಿಂದ ಮೇ-2022ರ ಅಂತ್ಯಕ್ಕೆ ಬರಬೇಕಾದ ವಿದ್ಯುತ್ ಶುಲ್ಕದ ಬಾಕಿ ಮೊತ್ತ ರೂ. 868.90 ಲಕ್ಷವನ್ನು 7 ದಿನಗಳ ಒಳಗಾಗಿ ಪಾವತಿಸುವಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಕೋರಲಾಗಿದೆ.
2022ರ ಮೇ ಅಂತ್ಯಕ್ಕೆ ಚಿತ್ರದುರ್ಗ ಬೆವಿಕಂ ವಿಭಾಗದ ವ್ಯಾಪಿಗೆ ಬರುವ ಗ್ರಾಮ ಪಂಚಾಯ್ತಿಗಳಾದ ದ್ಯಾಮವ್ವನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 5.6ಲಕ್ಷ, ಮುದ್ದಾಪುರ 11.70ಲಕ್ಷ, ಎಂ.ಕೆ.ಹಟ್ಟಿ 3.10 ಲಕ್ಷ, ಆಲಘಟ್ಟ 45.30ಲಕ್ಷ, ಅನ್ನೇಹಾಳ್ 8.60ಲಕ್ಷ, ಬೆಳಘಟ್ಟ 146.50 ಲಕ್ಷ, ಭರಮಸಾಗರ 57 ಲಕ್ಷ, ಭೀಮಸಮುದ್ರ 17 ಲಕ್ಷ, ಬ್ಯಾಲಾಳ್ 5 ಲಕ್ಷ, ಚಿಕ್ಕಬೆನ್ನೂರು 38.70ಲಕ್ಷ, ಚೋಳಘಟ್ಟ 16.90ಲಕ್ಷ, ಗೋಡಬನಾಳ್ 27 ಲಕ್ಷ, ಗೋನೂರು 5.50 ಲಕ್ಷ, ಹುಲ್ಲೂರು 71ಲಕ್ಷ, ಇಸಾಮುದ್ರ 49.40ಲಕ್ಷ, ಐನಹಳ್ಳಿ 12.90ಲಕ್ಷ, ಜಾನುಕೊಂಡ 39.50ಲಕ್ಷ, ಕಾಲ್ಗೆರೆ 21.10ಲಕ್ಷ, ಕೋಗುಂಡೆ 26.70ಲಕ್ಷ, ಕೋಳಹಾಳ್ 29.50ಲಕ್ಷ, ಕೂನಬೇವು 25.40ಲಕ್ಷ, ಲಕ್ಷ್ಮೀಸಾಗರ-14.20ಲಕ್ಷ, ಸಿದ್ದಾಪುರ-ರೂ.34.50ಲಕ್ಷ, ಸಿರಿಗೆರೆ-ರೂ.15.40ಲಕ್ಷ, ಸೊಂಡೆಕೊಳ-ರೂ.36.80ಲಕ್ಷ, ತುರುವನೂರು-ರೂ.75.90ಲಕ್ಷ, ಯಳಗೋಡು 28.70 ಲಕ್ಷದಷ್ಟು ಬಾಕಿ ಮೊತ್ತವನ್ನು ಉಳಿಸಿಕೊಂಡಿದೆ.
7 ದಿನಗಳ ಒಳಗೆ ಬಾಕಿ ಹಣ ಪಾವತಿಸದಿದ್ದಲ್ಲಿ ಕುಡಿಯುವ ನೀರು ಮತ್ತು ಬೀದಿ ದೀಪ ವಿದ್ಯುತ್ ಸ್ಥಾವರಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು.
ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಬೆಸ್ಕಾಂ ಕಂಪನಿ ಜವಾಬ್ದಾರಿಯಾಗಿರುವುದಿಲ್ಲ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಹಾಗೂ ಬೀದಿ ದೀಪ ಸ್ಥಾವರಗಳ ಬಾಕಿ ಮೊತ್ತವನ್ನು ಎಸ್ಕ್ರೋ ಖಾತೆಯಲ್ಲಿ ಮತ್ತು ಇ-ಗ್ರಾಮ್ ಸ್ವರಾಜ್ ತಂತ್ರಾಂಶದ ಮುಖಾಂತರ ಬಿಡುಗಡೆಯಾಗಿರುವ ಅನುದಾನದ ಸಂಪೂರ್ಣ ಮೊತ್ತವನ್ನು ಬೆಸ್ಕಾಂ ಪಾವತಿಸುವಂತೆ ಚಿತ್ರದುರ್ಗ ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…