ಕಳೆದ ವರ್ಷವಷ್ಟೇ ಐಎಎಸ್ ಅಧಿಕಾರಿ ರೋಹಿಣಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವೆ ಮಾತಿನ ವಾಕ್ಸಮರ ನಡೆದಿತ್ತು. ದೂರುಗಳು ದಾಖಲಾಗಿತ್ತು. ಆದರೆ ಇದೀಗ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಬೆಂಗಳೂರಿನ 7ನೇ ಎಸಿಎಂಎಂ ಕೋರ್ಟ್ ಗೆ ಖಾಸಗಿ ದೂರು ಸಲ್ಲಿಸಲಾಗಿದೆ. 2023ರ ಫೆಬ್ರವರಿ 19ರಂದು ರೋಹಿಣಿ ಸಿಂಧೂರಿ ಅವರು ಮಾಧ್ಯಮ ಹೇಳಿಕೆ ನೀಡಿದ್ದು, ಆ ಹೇಳಿಕೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಕೂಡ ಹಾಕಿದ್ದಾರೆ. ಈ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪ ಮಾಡಿದ್ದಾರೆ ಎಂದು ಡಿ.ರೂಪಾ ಆರೋಪ ಮಾಡಿದ್ದಾರೆ.
ಆದರೆ ಈ ಹೇಳಿಕೆ ಒಂದು ವರ್ಷದ ಹಿಂದೆ ಆಗಿರೋದು. ಆದರೆ ಒಂದು ವರ್ಷಗಳ ಬಳಿಕ ಡಿ.ರೂಪಾ ದೂರು ದಾಖಲಿಸಲಿಸಿರುವುದು ಯಾಕೆ ಎಂಬ ಚರ್ಚೆಗಳು ಶುರುವಾಗಿವೆ. ವರ್ಷದ ಹಿಂದೆ ಕೊಟ್ಟಂತ ಹೇಳಿಕೆ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾರಣವೇನು ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ವರ್ಷದ ಹಿಂದೆಯೇ ರೋಹಿಣಿ ಸಿಂಧೂರಿ ಅವರು ಡಿ.ರೂಪಾ ಹೇಳಿಕೆಯಿಂದ ಮಾನನಷ್ಟ ಆಗಿದೆ ಎಂದು ಕೇಸ್ ದಾಖಲಿಸಿದ್ದರು. ಈ ಕೇಸ್ ರದ್ದುಪಡಿಸಲು ಕೋರಿ ಡಿ.ರೂಪಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಕೂಡ ಈ ಕೇಸದ ರದ್ದು ಪಡಿಸಲು ನಿರಾಕರಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಹೋಗಿದ್ದಾರೆ. ಈ ಬೆನ್ನಲ್ಲೇ ಡಿ.ರೂಪಾ ಈಗ ಉಲ್ಟಾ ಮಾನನಷ್ಟ ಕೇಸು ದಾಖಲಿಸಿದ್ದಾರೆ. ರೋಹಿಣಿ ಸಿಂಧೂರಿ ಅವರ ಮೇಲೆಯೇ ದಾಖಲಿಸಿದ್ದಾರೆ.