ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜೊತೆ ಸಚಿವ ಸಿಸಿ ಪಾಟೀಲ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆ ನಡೆಸಿದ್ದು, ಸಂಧಾನ ಯಶಸ್ವಿಯಾಗಿದೆ. ಎರಡು ತಿಂಗಳಿನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಸಿಎಂ ಮಾತಿಗೆ ಒಪ್ಪಿಗೆ ಸೂಚಿಸಿ ಪಂಚಮಸಾಲಿ ಜಯಮೃತ್ಯುಂಜಯ ಶ್ರೀ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ನಡೆಸುವುದನ್ನು ಹಿಂಪಡೆದಿದ್ದಾರೆ. ಈ ಸಂಬಂಧ ಕೆಲವೇ ಕ್ಷಣಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ೨ ತಿಂಗಳಲ್ಲಿ ಮೀಸಲಾತಿ ಪರಿಶೀಲನೆ ಮತ್ತು ಸರ್ವೇ ಕಾರ್ಯ ಮುಗಿಸಿ,ಒಬಿಸಿ ಆಯೋಗದಿಂದ ವರದಿ ಪಡೆದು ಮೀಸಲಾತಿ ಘೋಷಣೆ ಮಾಡುತ್ತಾರಂತೆ.
ಸಭೆಯಲ್ಲಿ ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಮೀಸಲಾತಿಗಾಗಿ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ. ಬೆಂಗಳೂರಲ್ಲಿ ಬೃಹತ್ ಸಮಾವೇಶ ಮಾಡಿದ್ರು. ಅಭೂತ ಪೂರ್ವವಾದ ಪಾದಯಾತ್ರೆ ಮಾಡಿದ್ದಾರೆ. ಇದು ಸಾಧ್ಯನಾ ಎಂಬ ಭಾವನೆ ನಮ್ಮಲ್ಲೂ ಕಾಡುತ್ತದೆ. ಹೋರಾಟದ ಫಲವಾಗಿ ಸ್ವಲ್ಪ ದಿನಗಳಲ್ಲಿ ಸಿಹಿ ಸುದ್ದಿ ಬರುತ್ತೆ. ಅಂದು ಹೋರಾಟಕ್ಕೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಸಾಕಷ್ಟು ಅವಕಾಶ ಮಾಡಿದ್ರು. ಹೀಗಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಬೇಕು.
ನಾವು ರಾಜಕಾರಣದಲ್ಲಿ ಹಾವು ಮುಂಗಿಸಿ ಜೊತೆಗೆ ಎದುರಾಳಿಗಳ ತರ ಕಿತ್ತಾಡಿದ್ರು. ಇಂದು ಸಮುದಾಯದಕ್ಕೆ ಒಂದಾಗಬೇಕಾಗಿದೆ. ಕೂಡಲಸಂಗಮ ಪೀಠ ನಮ್ಮನ್ನು ಒಗ್ಗೂಡಿಸಿದೆ. ಮುಂದುವರಿದ ಸಮುದಾಯದಕ್ಕೆ ಮೀಸಲಾತಿ ಕೊಡಬೇಕು ಅಂದ್ರೆ ಯಾವುದೇ ಸರ್ಕಾರಕ್ಕೆ ಕಷ್ಟ ಆಗುತ್ತೆ. ನಾನು, ಯತ್ನಾಳ್ ಸಿಎಂ ಜೊತೆಗೆ ಮಾತನಾಡಿ ಬಂದಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ವಿಳಂಬವಾದರೂ ಉತ್ತಮ ರಿಸಲ್ಟ್ ಬರುತ್ತೆ ಎಂಬ ನಂಬಿಕೆ ಇದೆ. ಕಾನೂನಿನ ತೊಡಕುಗಳು ಇರೋದ್ರಿಂದ ಎಲ್ಲವೂ ಈಗಲೇ ಕೊಡಲು ಆಗಲ್ಲ..
ಹೀಗಾಗಿ ಸರ್ಕಾರದ ಭಾಗವಾಗಿ ನಾನು ಹೇಳ್ತಿದ್ದೇನೆ. ನಾವು ಎಷ್ಟೇ ಹೋರಾಟ ಮಾಡಿದ್ರು ಕೆಲವೊಮ್ಮೆ ನಮಗೆ ಯಾವುದು ಕೈಗೆ ಸಿಗಲ್ಲ. ಪ್ರತಿಭಟನೆ ಬೇಡ – ಇನ್ನೇರಡು ತಿಂಗಳಲ್ಲಿ ಸಿಹಿ ಸುದ್ದಿ ಸಿಗುತ್ತೆ ಎಂದು ಸಚಿವ ಸಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.