ಬೆಂಗಳೂರು: ಅಪ್ಪು ಈಗ ಎಲ್ಲರ ಮನಸ್ಸಲ್ಲೂ ಅಜರಾಮರವಾಗಿದ್ದಾರೆ. ಆದ್ರೆ ಅಪ್ಪುವಿನ ಹೆಸರು ಈ ಮುನ್ನ ಲೋಹಿತಾಶ್ವ ಅಂತ ಯಾರಿಗಾದ್ರೂ ಗೊತ್ತಿತ್ತಾ..? ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸಿನಿಮಾದಲ್ಲಿ ಪರಿಚಿತರಾಗಿದ್ದೆ ಪುನೀತ್ ರಾಜ್‍ಕುಮಾರ್ ಅಂತ. ಮೊದಲ ಸಿನಿಮಾದಲ್ಲೇ ಮನ ಗೆದ್ದಿದ್ದು ಅಪ್ಪು ಅವ್ರು ಅಂತ.
ಆದ್ರೆ ಅಪ್ಪು ಮೊದಲ ಹೆಸರು ಲೋಹಿತ್ ಅಂತ. ಬಾಲ್ಯದ ನಂತರ ಆ ಹೆಸರನ್ನ ಬದಲಾಯಿಸಿ ಪುನೀತ್ ಅಂತ ಬದಲಾಯಿಸಲಾಯಿತು. ಅದ್ಯಾಕೆ ಅನ್ನೋ ಮನಸ್ಸಿನ ಮಾತನ್ನ ಕುಮಾರ್ ಬಂಗಾರಪ್ಪ ಹೇಳಿಕೊಂಡಿದ್ದಾರೆ.
ಅಪ್ಪು ಅಂತ್ಯಕ್ರಿಯೆ ಇಂದು ಮುಗಿದಿದೆ. ಅಂತ್ಯಕ್ರಿಯೆ ಬಳಿಕ ಮಾತನಾಡಿರುವ ಕುಮಾರ್ ಬಂಗಾರಪ್ಪ ಆ ವಿಚಾರವನ್ನ ಬಿಚ್ಚಿಟ್ಟಿದ್ದಾರೆ. ಪುನೀತ್ ಗೆ ಬಾಲ್ಯದಲ್ಲಿ ಲೋಹಿತ್ ಎಂದು ಹೆಸರಿಡಲಾಗಿತ್ತು. ಸತ್ಯಹರಿಶ್ಚಂದ್ರ ನಾಟಕದಲ್ಲಿ ಲೋಹಿತನಿಗೆ ಅಲ್ಪ ಆಯುಷ್ಯ ಎಂದು ಗೊತ್ತಾಗಿ ಮನೆ ಮಂದಿಯೆಲ್ಲಾ ಬೇಸರ ಮಾಡಿಕೊಂಡಿದ್ರು.
ಹಿರಿಯರಿಗೂ ಆ ಹೆಸರು ಬೇಸರ ತರಿಸಿತ್ತು. ಎಲ್ಲರ ನಿರ್ಧಾರದ ಮೇರೆಗೆ ಜ್ಯೋತಿಷ್ಯರನ್ನ ಕೇಳಿ ಲೋಹಿತ್ ಬದಲಿಗೆ ಪುನೀತ್ ರಾಜ್‍ಕುಮಾರ್ ಅಂತ ಇಡಲಾಗಿತ್ತು. ಮೈಸೂರಿನ ಫಾರ್ಮ್ ಹೌಸ್ ಕೂಡ ಲೋಹಿತ್ ಅಂತಾಲೇ ಮುಂಚೆ ಇಡಲಾಗಿತ್ತು. ಹೆಸರು ಬದಲಾದ ಮೇಲೆ ಪುನೀತ್ ಫಾರ್ಮ್ ಹೌಸ್ ಅಂತ ಬದಲಾವಣೆ ಮಾಡಿದ್ರು.
ಆದ್ರೆ ಲೋಹಿತ್ ಆಗ್ಲಿ, ಪುನೀತ್ ಆಗ್ಲಿ ವಿಧಿಯಾಟವೇ ಬೇರೆ ಇರುತ್ತೆ ಅಲ್ವಾ ಅಂತ ಹಳೆಯದ್ದನ್ನೆಲ್ಲಾ ನೆನದು ಕುಮಾರ್ ಬಂಗಾರಪ್ಪ ಕಣ್ಣೀರು ಹಾಕಿದ್ರು.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…