ಚೆನ್ನೈ: ರಜನೀಕಾಂತ್ ಗುಣಮುಖರಾಗಿ ಮನೆಗೆ ಆಗಮಿಸಿದ್ದಾರೆ. ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಮನೆಗೆ ಬಂದಿದ್ದಾರೆ.
ಚೆನ್ನೈ ಕಾವೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಗುಣಮುಖರಾದ ಬಳಿಕ ಮನೆಗೆ ಬಂದು ದೇವರಿಗೆ ದೀಪ ಹಚ್ಚಿದ್ದಾರೆ. ಆ ವೊಂದು ಫೋಟೋವನ್ನು ರಜನೀಕಾಂತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Returned home 🙏 https://t.co/35VeiRDj7b
— Rajinikanth (@rajinikanth) October 31, 2021
ಮನೆಗೆ ಮರಳಿದೆ ಎಂದು ಆ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ರಜನಿಕಾಂತ್ ಅವರಿಗೆ ಅಕ್ಟೋಬರ್28 ರಂದು ಎದೆ ನೋವು ಹಾಗೂ ಸುಸ್ತು ಕಾಣಿಸಿಕೊಂಡಿತ್ತು. ಮುಂಜಾಗ್ರತ ಕ್ರಮವಾಗಿ ಅವರನ್ನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತ ಸರಾಗವಾಗಿ ಸಂಚಲನ ಮಾಡಲು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸದ್ಯ ಅವರ ಆರೋಗ್ಯ ಚೆನ್ನಾಗಿದ್ದು, ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.