ರಾಮನಗರ: ಕಳೆದರ ಎರಡು ದಿನದಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಮನಗರ, ಚನ್ನಪಟ್ಟಣದ ಜನರ ಸ್ಥಿತಿ ಹೇಳತೀರದು. ಅಷ್ಟು ಕೆಟ್ಟ ಸ್ಥಿತಿಗೆ ತಲುಪಿದೆ. ಕೂರಲು ಆಗುತ್ತಿಲ್ಲ, ನಿಲ್ಲಲ್ಲು ಆಗುತ್ತಿಲ್ಲ. ಮನೆಗಳಿಗೆಲ್ಲಾ ನೀರು ತುಂಬಿದೆ. ಜನ ಓಡಾಡುವುದಕ್ಕೂ ಆಗುತ್ತಿಲ್ಲ. ಎಲ್ಲಿ ನೋಡಿದರೂ ಸ್ವಿಮ್ಮಿಂಗ್ ಪೂಲದ ನಂತ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆಲ್ಲ ಕಾರಣ ಅವೈಜ್ಞಾನಿಕ ದಶಪಥ ಹೈವೇಯೇ ಕಾರಣ ಎನ್ನಲಾಗುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರಕ್ಕೆ ತೆರಳುತ್ತಿದ್ದಾಗ ಅವರ ಕಾರು ಕೂಡ ನೀರಿನಲ್ಲಿ ನಿಂತು ಹೋಗಿತ್ತು. ಯೋಗಿಶ್ವರ್ ಕೂಡ ಅಂಡರ್ ಪಾಸ್ ನಲ್ಲಿ ಸಿಲುಕಿದ್ದರು. ಆದರೆ ಅಲ್ಲಿಯೇ ಇರುವ ಜನರ ಸ್ಥಿತಿ ಏನಾಗಬೇಡ.
ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. 2004ರಲ್ಲಿಯೂ ಇದೇ ಸ್ಥಿತಿ ಆಗಿತ್ತು. ಆದರೆ ಇಷ್ಟರಮಟ್ಟಿಗೆ ಸಮಸ್ಯೆ ಕಾಡಿರಲಿಲ್ಲ. ಆದರೆ ಇಂದು ಸಾವಿರಾರು ಜನ ಬೀದಿಗೆ ಬಂದಿದ್ದಾರೆ. ಮಳೆಯೆಲ್ಲಾ ನಿಂತ ಮೇಲೆ ಇಲ್ಲಿ ಯಾವ ವ್ಯವಸ್ಥೆ ಮಾಡಬೇಕು ಎಂಬುದನ್ನು ಗಮನಹರಿಸುತ್ತೇವೆ. ಈಗಾಗಲೇ ಗಂಜಿಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಎಂದಿದ್ದಾರೆ.
ರಾಮನಗರದಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿ ಬಂದಿದ್ದಾರೆ. ವಾಹನಗಳೆಲ್ಲಾ ನೀರಿನಲ್ಲಿ ಮುಳುಗಿದ. ದಶಪಥ ಹೈವೇ ಮಾಡಲು ಹೋಗಿ ಇಂದು ಅವಾಂತರ ಸೃಷ್ಟಿಯಾಗಿದೆ. 10ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಇಂದು ರಾಮನಗರಕ್ಕೆ ಭೇಟಿ ನೀಡಲಿದ್ದಾರೆ.