Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಧೋನಿ ಜೊತೆಗಿನ ಸಂಬಂಧ ಬ್ಲಾಕ್ ಮಾರ್ಕ್ : ಲಕ್ಷ್ಮೀ ರೈ ಮಾತಾಡಿದ್ದ ವಿಡಿಯೋ ಈಗ ವೈರಲ್..!

Facebook
Twitter
Telegram
WhatsApp

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಲವ್ ವಿಚಾರ ನಮ್ಗೆ ನಿಮ್ಗೆಲ್ಲಾ ಗೊತ್ತೆ ಇದೆ. ಅದು ಸಾಕ್ಷಿ ಜೊತೆ ಅನ್ನೋದು. ಆದ್ರೆ ಅದಕ್ಕೂ ಮುಂಷೆ ಸ್ಯಾಂಡಲ್ ವುಡ್ ಖ್ಯಾತ ನಟಿಯನ್ನ ಪ್ರೀತಿ ಮಾಡ್ತಾ ಇದ್ರು ಅನ್ನೋ ವಿಚಾರ ಕೊಂಚ ಹಳೆಯದ್ದಾದ್ರೂ, ಈಗ ವೈರಲ್ ಆಗ್ತಾ ಇದೆ.

ಹೌದು, ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ಲಕ್ಷ್ಮೀ ರೈ ಜೊತೆಗೆ ಧೋನಿ ಡೇಟಿಂಗ್ ಮಾಡಿದ್ದರಂತೆ. ಆ ಬಳಿಕ ಅವರಿಬ್ಬರ ನಡುವೆ ಬ್ರೇಕಪ್ ಕೂಡ ಆಗಿತ್ತು. ಅದಾದ ಮೇಲೆ ಧೋನಿ ಸಾಕ್ಷಿ ಅವರನ್ನ ಪ್ರೀತಿಸಿ‌ಮದುವೆಯಾಗಿದ್ದರು. ಈಗ ಅವರಿಬ್ಬರಿಗೆ ಜೀವಾ ಎಂಬ ಮುದ್ದಾದ ಮಗಳಿದ್ದಾಳೆ.

ಧೋನಿ ಹಾಗೂ ಲಕ್ಷ್ಮೀ ರೈ ನಡುವಿನ ಸಂಬಂಧದ ಬಗ್ಗೆ ಸ್ವತಃ ಲಕ್ಷ್ಮೀ ರೈ ಅವರೇ ಮಾತಾಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗಿದೆ. ಧೋನಿ ಹೊರತುಪಡಿಸಿ ಮಿಕ್ಕ ಯಾರೊಂದಿಗಿನ ಜೊತೆಗೆ ತಮ್ಮ ರೊಮ್ಯಾಂಟಿಕ್ ಸಂಬಂಧ ಅಷ್ಟಾಗಿ ಸುದ್ದಿ ಮಾಡಲಿಲ್ಲ ಎಂದು ಹೇಳಿಕೊಂಡಿರುವ ಲಕ್ಷ್ಮೀ ಬ್ರೇಕ್‌ ಅಪ್ ಆದ ಬಳಿಕವೂ ತಮ್ಮಿಬ್ಬರ ನಡುವೆ ಪರಸ್ಪರ ಗೌರವವಿದೆ ಎಂಬ ಮಾತುಗಳನ್ನು ಆಡಿದ್ದಾರೆ. ಧೋನಿ ಒಬ್ಬ ಒಳ್ಳೆಯ ವ್ಯಕ್ತಿ. ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಇಷ್ಟ ಪಡುವಂಥ ವ್ಯಕ್ತಿಯಾದ ಧೋನಿ ಒಬ್ಬ ಕರುಣಾಮಯಿ ಹಾಗೂ ಸಮತೋಲಿತ ವ್ಯಕ್ತಿ ಎಂದು ಹೇಳಿದ್ದಾರೆ.

ಧೋನಿ ಜೊತೆಗೆ ನನ್ನ ಸಂಬಂಧ ಒಂದು ರೀತಿ ಬ್ಲಾಕ್ ಮಾರ್ಕ್ ಇದ್ದಂತೆ ಹಾಗೂ ಅದು ಬಹು ಕಾಲದವರೆಗೂ ಮಾಸುವುದಿಲ್ಲ ಎಂದು ನಂಬಿದ್ದೇನೆ. ನಾವು ಬೇರೆಯಾಗಿ ಐದು ವರ್ಷಗಳಾದರೂ ಸಹ ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ ಎಂಬ ವಿಡಿಯೋ ಈಗ ವೈರಲ್ ಆಗುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!