ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ. 120 ವರ್ಷದ ಪಕ್ಷ 20 ಸೀಟ್ ಗೆಲ್ಲೋಕೆ ಆಗಲಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಹೋಗಿ ಪ್ರಾದೇಶಿಕ ಪಕ್ಷ ಆಗಿದೆ. ಈಗ ಕಾಂಗ್ರೆಸ್ ಪಕ್ಷವೇ ಅಡಾಕ್ ಪಾರ್ಟಿ. ಒಡೆದ ಮನೆ. ಅವರಲ್ಲೇ ಕಚ್ಚಾಟ ಪ್ರಾರಂಭವಾಗಿದೆ.
ಕಾಂಗ್ರೆಸ್ ನವರು ತಮ್ಮ ಮನೆ ಶುದ್ಧ ವಾಗಿಲ್ಲದಿದ್ದರೂ, ಬೇರೆ ಮನೆಯ ಶುದ್ಧತೆಯ ಬಗ್ಗೆ ಮಾತನಾಡುತ್ತಾರೆ, ಎಂದು ಕಂದಾಯ ಸಚಿವ ಆರ್ ಅಶೋಕ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಗ್ರಪ್ಪ ಮತ್ತು ಸಲೀಂ ಮಾತುಕತೆ ವಿಚಾರಾವಾಗಿ ಮಾತನಾಡಿ, ಡಿಕೆಶಿಯನ್ನ ಸೈಡ್ ಲೈನ್ ಮಾಡುವದಕ್ಕೆ ಕಾಂಗ್ರೆಸ್ ಮುಂದಾಗಿದೆ. ಕುತಂತ್ರ ರಾಜಕೀಯಕ್ಕೆ ಕಾಂಗ್ರೆಸ್ ಹೆಸರು ವಾಸಿ. ಅವರ ಪಕ್ಷದವರಿಗೆ ಅವರೇ ಶತ್ರುಗಳು. ಇನ್ನೆಂದೂ ಕಾಂಗ್ರೆಸ್ ಗೆ ಈ ದೇಶದಲ್ಲಿ ಭವಿಷ್ಯವಿಲ್ಲ, ಎಂದರು.
ಮೋದಿ ಹೆಬ್ಬೆಟ್ ಗಿರಾಕಿ ಎಂದ ಕಾಂಗ್ರೆಸ್ ಮೇಲೆ ಹರಿಹಾಯ್ದ ಸಚಿವರು, “ಬುದ್ದಿ ಇದ್ದವರು ಈ ರೀತಿ ಮಾತನಾಡುವದಿಲ್ಲ. ಮೋದಿ ಪ್ರಪಂಚಕ್ಕೇ ಮಾರ್ಗದರ್ಶನ ಮಾಡುವ ನಾಯಕ. ಅದೆಷ್ಟೋ ಜನಸ್ನೇಹಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಪ್ರಪಂಚವೇ ಮೋದಿಯವರನ್ನು ಗೌರವಿಸುತ್ತಿದೆ. ಎಲ್ಲ ದೇಶದವರು ಮೋದಿಯವರನ್ನು ತಮ್ಮ ದೇಶಕ್ಕೆ ಗೌರವದಿಂದ ಆಹ್ವಾನಿಸುತ್ತಿದ್ದಾರೆ. ಮನಹೋನ್ ಸಿಂಗ್ ಪ್ರಧಾನಿ ಇದ್ದಾಗ ಬೇರೆ ದೇಶದವರು ಯಾರಾದ್ರು ಕರೆಯುತ್ತಿದ್ದರಾ? ಲೋಕಸಭೆಯಲ್ಲಿ ಮೋದಿ ವಿರುದ್ದ ಅಭ್ಯರ್ಥಿಯೆ, ಇಲ್ಲ ಎಂದು ಲೇವಡಿ ಮಾಡಿದರು.