ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಇಂದು ಪಂಜಾಬ್ ಗೆ ತೆರಳಿದ್ದಾಗ ರೈತರ ಪ್ರತಿಭಟನೆ ಹಾಗೂ ಹವಮಾನ ವೈಪರೀತ್ಯ ದಿಂದ ಸುಮಾರು 20 ನಿಮಿಷಗಳ ಕಾಲ ಫ್ಲೈ ಓವರ್ ಮೇಲೆಯೇ ಕಳೆಯಬೇಕಾಯಿತು. ಜೊತೆಗೆ ಪ್ರಧಾನಿ ಅವರು ಭಾಗವಹಿಸಬೇಕಾಗಿದ್ದ ಕಾರ್ಯಕ್ರಮವನ್ನು ಮುಂದೂಡಬೇಕಾಯಿತು. ಈ ಬಗ್ಗೆ ಸರಿಯಾದ ಭದ್ರತೆ ಒದಗಿಸಿಲ್ಲ ಎಂದು ಪಂಜಾಬ್ ಸಿಎಂ ಮೇಲೆ ಹೊರಿಸಲಾಗಿತ್ತು.
ಪ್ರಧಾನಿ ಮೋದಿ ಅವರ ಸಂಚಾರ ಮಾರ್ಗದ ಬಗ್ಗೆ ಗೊತ್ತಿದ್ದರು ಸಿಎಂ ಭದ್ರತೆ ನೀಡಿಲ್ಲ ಎಂದಿದ್ದರು. ಇಂದು ಈ ಬಗ್ಗೆ ಪಂಜಾಬ್ ಸಿಎಂ ಚರಣ್ ಜೀತ್ ಸಿಂಗ್ ಚನ್ನಿ, ನನಗೆ ಕೋವಿಡ್ ಆಗಿದ್ದ ಕಾರಣ ನಾನು ಪ್ರಧಾನಿಯವರ ಭೇಟಿಗೆ ಹೋಗಲು ಆಗಿಲ್ಲ. ಮೋದಿಯವ ಭೇಟಿ ವೇಳೆ ಆದ ಭದ್ರತ ಲೋಪದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈ ರೀತಿಯಾಗಲೂ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತೇವೆ.
ನಮ್ಮ ಪ್ರಧಾನಿ ಬಗ್ಗೆ ನಮಗೂ ಗೌರವವಿದೆ. ಒಂದು ವೇಳೆ ಪ್ರಧಾನಿ ಅವರ ಮೇಲೆ ದಾಳಿ ನಡೆದಿದ್ದರೆ ನನ್ನ ಎದೆಯನ್ನೇ ಕೊಡುತ್ತಿದ್ದೆ. ರೈತರ ಪ್ರತಿಭಟನೆ, ಹವಮಾನ ವೈಪರೀತ್ಯ ಇದೆ ಪ್ರವಾಸ ಮುಂದೂಡಿ ಎಂದು ಮೋದಿ ಅವರ ಬಳಿ ಕೇಳಿಕೊಂಡಿದ್ದೆವು. ಆದ್ರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದಿದ್ದಾರೆ.