ಚಿತ್ರದುರ್ಗ, (ಅ.29) : ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರು ಕೇವಲ 46 ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿರುವುದು ಊಹಿಸುಕೊಲ್ಳಲು ಆಗುತ್ತಿಲ್ಲ. ಇದು ಅನ್ಯಾಯದ ಸಾವು. ಅವರು ಆಸ್ಪತ್ರೆಗೆ ಸೇರಿದ್ದ ಸುದ್ದಿ ಬೆಳಗ್ಗೆ ತಿಳಿದಿತ್ತು. ಆರೋಗ್ಯವಾಗಿ ಮರಳಿ ಬರುತ್ತಾರೆಂದು ತಿಳಿದಿದ್ದೆ ಆದರೆ ವಿಧಿಯಾಟವಾಡಿದೆ ಎಂದರು.
ಚಿತ್ರದುರ್ಗದಲ್ಲಿ ದೊಡ್ಮನೆ ಹುಡುಗ, ಅಜಯ್ ಸಿನಿಮಾಗಳ ಚಿತ್ರೀಕರಣ ಕೋಟೆ ಮತ್ತು ಮದಕರಿ ವೃತ್ತದಲ್ಲಿ ನಡೆಸಿದ್ದರು ಯಶಸ್ವಿಯಾಗಿದ್ದರು. ಅವರಿಗೆ ನಾನು ಸಹ ದೊಡ್ಡ ಅಭಿಮಾನಿಯಾಗಿದ್ದೆ ಎಂದರು.
ತಂದೆ ರಾಜ್ ಕುಮಾರ್ ಅವರಂತೆ ಪುನೀತ್ ರಾಜ್ಯದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮಾದರಿ ಚಿತ್ರಗಳನ್ನು ತೆಗೆದು ಜನಗಳ ನಿಜವಾದ ರಾಜ್ ಕುಮಾರ್ ಆದರು. ತಂದೆಯಂತೆ ಅವರು ಸಹ ಸರಳ ಸಜ್ಜನಿಕೆ, ದೊಡ್ಡ ಸಿನಿಮಾ ಸ್ಟಾರ್ ಎಂಬ ಅಹಂ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದರು.
ನಮಗೆ ತಿಳಿದಿರುವಂತೆ ಟ್ರಸ್ಟ್ ಮೂಲಕ ಅನೇಕ ಶಾಲೆಗಳ ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ದಾಶ್ರಮ, ಆನಾಥಾ ಆಶ್ರಮ ಮೂಲಕ ಎಲ್ಲಾ ನಟರಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿದ್ದರು.
ರಾಜ್ ಕುಮಾರ್ ಸಿನಿಮಾ ಮೂಲಕ ರಾಜ್ಯದ ಯುವ ಸಮೂಹದಲ್ಲಿ ತಂದೆ-ತಾಯಿಯನ್ನು ಹೇಗೆ ಹಾರೈಕೆ ಮಾಡಬೇಕು ಎಂಬುದನ್ನು ಒಂದು ಪ್ರಸ್ತುತ ಸಮಾಜವನ್ನು ಕಟುಂಬಗಳನ್ನು ತಿದ್ದುವ ಕೆಲಸ ಮಾಡಿದರು. ನಾನು ಸಹ ರಾಜ್ ಕುಮಾರ್ ಸಿನಿಮಾ ನೋಡಿ ಮನ ಸೋತಿದ್ದೆ ಎಂದು ಸ್ಮರಿಸಿದರು.
ರಾಜ್ ಕುಟುಂಬಕ್ಕೆ ದೇವರು ಪುನೀತ್ ರಾಜ್ ಕುಮಾರ್ ಕಳೆದುಕೊಂಡಿರುವ ದುಃಖವನ್ನು ಭರಿಸುವ ಶಕ್ತಿ ದೇವರು ರಾಜ್ ಕುಟುಂಬಕ್ಕೆ ನೀಡಲಿ ಮತ್ತು ರಾಜ್ಯ ಎಲ್ಲಾ ಅವರ ಅಭಿಮಾನಿಗಳು ಶಾಂತಿಯಿಂದ ಅವರ ವಿಧಿ ವಿಧಾನ ಅಂತಿಮ ಕಾರ್ಯ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.