ಕೊಲಂಬೊ: ಶ್ರೀಲಂಕಾದಲ್ಲಿ ದಿನದಿಂದ ದಿನಕ್ಕೆವಾತಾವರಣ ಹದಗೆಡುತ್ತಿದೆ. ಪ್ರತಿಭಟನನಾಕಾರರ ಕಿಚ್ಚು ಹೆಚ್ಚಾಗುತ್ತಿದೆ. ಶ್ರೀಲಂಕಾ ಆರ್ಥಿಕತೆಯಿಂದ ದಿವಾಳಿಯಾಗಿದ್ದು, ಅಲ್ಲಿನ ಜನ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸರ್ಕಾರದ ಪರ ಬೆಂಬಲಿಗರು ಕಂಡರೆ ಅಕ್ರೋಶಭರಿತರಾಗುತ್ತಿದ್ದಾರೆ. ಇದೇ ಹಿನ್ನೆಲೆ ಸರ್ಕಾರದ ವಾಹನದಲ್ಲಿದ್ದ ಬೆಂಬಲಿಗನನ್ನು ಪ್ರತಿಭಟನಾಕಾರರು ಹಿಡಿದೆಳೆದು ಕಸದ ಗಾಡಿಗೆ ಎಸೆದಿರುವ ಘಟನೆ ನಡೆದಿದೆ.
ಪ್ರತಿಭಟನಾಕಾರರ ಆಕ್ರೋಶ ನೋಡಿದ ಪ್ರಧಾನಿ ಹುದ್ದೆಯಲ್ಲಿದ್ದ ರಾಜಪಕ್ಸೆ ಈಗಾಗಲೇ ರಾಜೀನಾಮೆ ನೀಡಿ, ಸುರಕ್ಷತೆಯ ದೃಷ್ಟಿಯಿಂದ ಕುಟುಂಬ ಸಮೇತರಾಗಿ ದೇಧ ತೊರೆದಿದ್ದಾರೆ ಎನ್ನಲಾಗಿದೆ. ಇನ್ನು ರಾಜಪಕ್ಸೆ ಅವರು ಸಂಚಾರಕ್ಕೆ ಬಳಸುತ್ತಿದ್ದ ಬಸ್ ಗಳಿಗೆ ಕಂಡ ಕಂಡಲ್ಲಿ ದೇಶಾದ್ಯಂತ ಬೆಂಕಿ ಹಚ್ಚಲಾಗಿದೆ.
ಇನ್ನು ಪ್ರತಿಭಟನಾಕಾರರ ಆಕ್ರೋಶಕ್ಕೆ 219 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಕೊಲಂಬೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಜಿ ಪ್ರಧಾನಿ ರಾಜಪಕ್ಸೆ ಅವರ ಕುಟುಂಬಕ್ಕೆ ಸಂಬಂಧಿಸಿದ ಗ್ರಂಥಾಲಯಕ್ಕೂ ನುಗ್ಗಿ ದಾಳಿ ನಡೆಸಲಾಗಿದೆ. ರಾಜಕಾರಣಿಗಳಿಗೆ ಸಂಬಂಧಿಸಿದ 41ಕ್ಕೂ ಹೆಚ್ಚು ಮನೆಗಳನ್ನು ಸುಟ್ಟು ಕರಕಲು ಮಾಡಲಾಗಿದೆ. ನೂರಾರು ದ್ವಿಚಕ್ರ ವಾಹನಗಳು ಧ್ವಂಸವಾಗಿದೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ದೇಶ ಅಕ್ಷರಶಃ ಸ್ಮಶಾನವಾಗಿ ಪರಿವರ್ತನೆಯಾಗುತ್ತಿದೆ. ಜನ ಕಂಡ ಕಂಡಲ್ಲಿ ವಸ್ತುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ತಮ್ಮ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದ್ದಾರೆ.