ಲಕ್ನೋ: ಪಿಎಂ ನರೇಂದ್ರ ಮೋದಿ ಆಗಾಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನ ಹೊಗಳುತ್ತಿರುತ್ತಾರೆ. ಇದೀಗ ಮತ್ತೆ ಆ ಹೊಗಳಿಕೆ ಯುಪಿ ಸಿಎಂಗೆ ಸಿಕ್ಕಿದೆ. ಅಪರಾಧಿಗಳನ್ನ ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಇಂದು ಮಥುರಾದಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡ ವಿಶ್ವವಿದ್ಯಾಲಯ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗುತ್ತಿದ್ದರು. ಆದ್ರೀಗ ಲಂಗು ಲಗಾಮಿಲ್ಲದೆ ವರ್ತಿಸುತ್ತಿದ್ದವರಿಗೆ ಸರ್ಕಾರ ಇದೀಗ ತಕ್ಕ ಪಾಠ ಕಲಿಸುತ್ತಿದೆ.
ಮೀರತ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸಿಸುವ ಜನರ ಮನೆಗಳಿಗೆ ಹಿಂದೆ ಬೆಂಕಿ ಹಚ್ಚಲಾಗುತ್ತಿತ್ತು. ಇದರಿಂದ ಬೇಸತ್ತು ಜನ ಬೇರೆಡೆಗೆ ಗುಳೆ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಸರ್ಕಾರದ ಪಾತ್ರ ರಕ್ಷಕನದ್ದಾಗಿರಬೇಕು. ಸಾಮರ್ಥ್ಯವನ್ನು ಪ್ರೋತ್ಸಾಹಿಸಬೇಕು. ಯುವಕರು ತಪ್ಪು ಮಾಡಿದರೆ ಅದನ್ನು ನಿರ್ಲಕ್ಷಿಸಬಾರದು ಎಂದಿದ್ದಾರೆ.