ಮೈಸೂರು: ಮನೆ ಒಳಗಡೆ ಅಣ್ಣ ತಮ್ಮ ಜಗಳ ಆಡಿಯೇ ಆಡುವುದಿಲ್ಲವಾ. ಹಾಗಂತ ಹೇಳಿದ್ರೆ ಇದು ವೈಯಕ್ತಿಕ ದ್ವೇಷ ಅಲದಲ. ನಾವೂ ಒಂದೇ ಪಾರ್ಟಿಯವರು. ನಾವು ಎಷ್ಟೇ ಅಭಿಪ್ರಾಯ ಬೇಧಗಳಿದ್ದರು ಯಾರೆ ಒಬ್ಬರು ಬೋಲೋ ಭಾರತ್ ಮಾತಾಕಿ ಅಂದ್ರೆ ಜೈ ಅಂತೀವಿ. ಅದೇ ತರ ಸಣ್ಣ ಪುಟ್ಟ ಅಭಿಪ್ರಾಯ ಬೇಧಗಳಿತ್ತು. ನಾಗೇಂದ್ರಣ್ಣ ಅವರಿಗೂ ಕೂಡ. ಚುನಾವಣೆ ಹತ್ತಿರ ಬರುತ್ತಿದೆ ರಸ್ತೆ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ. ಡಾಂಬರೀಕರಣ ಮಾಡಿದ್ರೆ ರಸ್ತೆ ಕಿತ್ತಾಕಿದ್ರೆ ಗ್ಯಾಸ್ ಪೈಪ್ ಲೈನ್ ತಡವಾಗುತ್ತೆ ಅನ್ನೋದಿತ್ತು. ಈಗ ಮಾತುಕತೆ ಮೂಲಕ ಬಗೆ ಹರಿದಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿ, ಎಲ್ಲಿವರೆಗೂ ಸಿದ್ದರಾಮಯ್ಯ ಅವರು ಈ ಜಿಹಾದಿಗಳನ್ನು ಪ್ರೋತ್ಸಾಹಿಸುವಂಥ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲ್ಲ. ಅಲ್ಲಿವರೆಗೂ ಈ ಥರದ ಘಟನೆಗಳು ಸಂಭವಿಸುತ್ತಿವೆ. ಇದೇ ಸಿದ್ದರಾಮಯ್ಯ 2018 ರಲ್ಲಿ SDPI, Kfdಯ 175 ಕ್ರಿಮಿನಲ್ ಪ್ರಕರಣವನ್ನು ವಾಪಾಸ್ ತೆಗೆದುಕೊಂಡು ಕ್ರಿಮಿನಲ್ ಗಳನ್ನು ರಾಜಾರೋಷವಾಗಿ ಓಡಾಡುವುದಕ್ಕೆ ಬಿಟ್ಟರೋ ಆಗಿಂದ ಸರಣಿ ಹತ್ಯೆಗಳಾಯ್ತು. ಟಿಪ್ಪು ಜಯಂತಿ ಮಾಡಿ ನಮ್ಮ ನೆಲದ ಭಾಷೆ, ಸಂಸ್ಕೃತಿ ಯನ್ನು ಮಟ್ಟಹಾಕಲು ಪ್ರಯತ್ನ ಮಾಡಿದಂತ ಟಿಪ್ಪಿ ಸುಲ್ತಾನ್ ನನ್ನು ರಾರಾಜಿಸುವಂತೆ ಮಾಡಿ ತಾಲಿಬಾನಿ ಮನಸ್ಥಿತಿಗಳಿಗೆ ಅವತ್ತು ಕೂಡ ಪ್ರೋತ್ಸಾಹ ಕೊಟ್ಟರು ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್ ಪೈಪ್ ಲೈನ್ ಆದಷ್ಟು ಬೇಗ ಕೊಡಬೇಕೆಂದು ತೀರ್ಮಾನಿಸಿದ್ದೇವೆ. ಚಾಮರಾಜ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬರಲಿದೆ. ಮೋದಿಜೀ ಅವರು ಬಂದ ಸಂದರ್ಭದಲ್ಲಿ ನಾವೂ ಮನೆ ಮನೆಗೂ ಗ್ಯಾಸ್ ಪೈಪ್ ಲೈನ್ ಕೊಡಬೇಕೆಂಬ ಉದ್ದೇಶದಿಂದ, ಇದ್ದಂತ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತು ಕತೆ ಮೂಲಕ ಬಗೆ ಹರಿಸಿದ್ದೇವೆ.