ಬೆಂಗಳೂರು: ತೈಲ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಗ್ರಾಹಕರು ಕಣ್ಣು ಬಾಯಿ ಬಿಡುವಂತಾಗಿದೆ. ಕಡಿಮೆಯಾಗುತ್ತೇನೋ ಎಂಬ ನಿರೀಕ್ಷೆ ಗ್ರಾಹಕರಲ್ಲಿ ಇದೆ. ಆದ್ರೆ ಆ ನಿರೀಕ್ಷೆ ದಿನೇ ದಿನೇ ಹುಸಿಯಾಗುತ್ತಲೇ ಇದೆ. ಕಡಿಮೆ ದುಡಿಮೆ.. ಖರ್ಚು ಜಾಸ್ತಿ ಎನ್ನುವಂಥ ಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ. ಸತತ ಐದು ದಿನಗಳಿಂದ ಏರಿಕೆಯಾದ ತೈಲ ಬೆಲೆ, ಇಂದು ಮತ್ತೆ 35 ಪೈಸೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಇವತ್ತಿನ ಏರಿಕೆಯ ಪ್ರಕಾರ, 113 ರೂಪಾಯಿ 93 ಪೈಸೆ ಹೆಚ್ಚಳವಾಗಿದೆ. ಹಾಗೇ ಡಿಸೇಲ್ ಪ್ರತಿ ಲೀಟರ್ ಗೆ 104 ರೂಪಾಯಿ 50 ಪೈಸೆಯಾಗಿದೆ. ಬೆಲೆ ಗಗನಕುಸುಮವಾಗುತ್ತಿರೋದು ಗ್ರಾಹಕರ ಜೇಬಿಗೆ ಕತ್ತರಿಯಾಕಿದಂತಾಗಿದೆ.
ಇನ್ನು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 110.04 ರೂಪಾಯಿ ಪೆಟ್ರೋಲ್ ಬೆಲೆಯಾದರೆ, 98.42 ರೂಪಾಯಿ ಪ್ರತಿ ಲೀಟರ್ ಡಿಸೇಲ್ ಬೆಲೆಯಾಗಿದೆ.