ನವದೆಹಲಿ: ಈ ಕೊರೊನಾ ಮಹಾಮಾರಿ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೊರಕನಾದಿಂದಾಗಿ ಈ ಎರಡು ವರ್ಷ ಅದೆಷ್ಟು ಜನ ನರಕ ಅನುಭವಿಸಿದರೋ ದೇವರಿಗೆ ಗೊತ್ತು. ಅದೆಷ್ಟು ಜನ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಕುಳಿತರೋ. ಅದೆಷ್ಟು ಜನ ಸಾಲಕ್ಕೆ ಸಿಲುಕಿದರೋ..? ಇನ್ನು ಕೂಡ ಬಡವರು, ಮಧ್ಯಮವರ್ಗದವರು ಚೇತರಿಸಿಕೊಳ್ಳುತ್ತಲೇ ಇದ್ದಾರೆ. ಆದ್ರೆ ಆ ಚೇತರಿಕೆಯ ನಡುವೆ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ.
ನಮ್ಮ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ರಾಷ್ಟ್ರ. ಬಡತನ ರೇಖೆಯಿಂದ ಹೊರ ಬರುತ್ತಿರುವ ಸಮಯದಲ್ಲಿ ಇದೀಗ ಅದೆಷ್ಟೋ ಕೋಟಿ ಜನ ಬಡತನಕ್ಕೀಡಾಗಿದ್ದಾರೆ. ಇದನ್ನ ವರದಿಯೊಂದು ಹೇಳಿದೆ.
ಆಕ್ಸ್ ಫ್ಯಾಮ್ ಇಂಟರ್ ನ್ಯಾಷನಲ್ ಈ ವರದಿ ತಯಾರು ಮಾಡಿದ್ದು, ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕಾನಾಮಿಕ್ ಫೋರಂನಲ್ಲಿ ಈ ವರದಿಯನ್ನ ಬಿಡುಗಡೆ ಮಾಡಲಾಗಿದೆ. ಈ ಕೊರೊನಾದಿಂದಾಗಿ ಲಿಂಗ ಸಮಾನತೆಯನ್ನು 99 ವರ್ಷಗಳಿಂದ 135 ವರ್ಷಗಳವರೆಗೆ ಹಿಂದಕ್ಕೆ ತಳ್ಳಿದೆ. ಅಷ್ಟೇ ಅಲ್ಲ ಈ ವರದಿ ಹೇಳುವ ಪ್ರಕಾರ ಮಹಿಳೆಯರು 800 ಕೋಟಿ ನಷ್ಟ ಅನುಭವಿಸಿದ್ದಾರಂತೆ.