ಬೆಂಗಳೂರು :ಹುಟ್ಟಿದಾಗಿನಿಂದ ಕ್ರೈಸ್ತರಾಗಿರುವವರ ಧಾರ್ಮಿಕ ಭಾವನೆಗೆ ನೋವು ಬರುವಂತೆ ನಾನು ಮಾತನಾಡುವುದಿಲ್ಲ. ನನ್ನ ಮಾತಿನಿಂದ ನೋವಾಗಿದ್ರೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಲಿದರು. ಈ ವೇಳೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಮೂಲ ಕ್ರಿಶ್ಚಿಯನ್ ಸಮುದಾಯದವರ ಪರವಾಗಿದೆ. ನಾವೂ ಕೂಡ ಕ್ರೈಸ್ತ ಸಮಾಜ, ಮಿಷನರಿ ಪರವಾಗಿದ್ದೇವೆ.ಆದರೆ ಬಲವಂತವಾಗಿ ಮತಾಂತರ ಮಾಡುತ್ತಿರುವವರ ವಿರುದ್ಧ ನಮ್ಮ ಸಮರ ಇದ್ದೇ ಇರುತ್ತದೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.
ಹುಟ್ಟಿದಾಗಿನಿಂದ ಕ್ರೈಸ್ತರಾಗಿರುವವರ ಧಾರ್ಮಿಕ ಭಾವನೆಗೆ ನೋವು ಬರುವಂತೆ ನಾವು ಮಾತನಾಡುವುದಿಲ್ಲ. ನನ್ನ ಮಾತಿನಿಂದ ನೋವಾಗಿದ್ರೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ. ಸಣ್ಣ ಪುಟ್ಟ ನೋವಾಗಿದ್ರೆ, ನಮಗೂ ಆಗಿದೆ. ಹಿಂದೂಗಳಾಗಿ ಹುಟ್ಟಿ, ನಾವು ಸಾಕಷ್ಟು ನೋವು ತಿನ್ನುತ್ತಿದ್ದೇವೆ. ನಾನು ಬ್ಯಾಕ್‌ವರ್ಡ್, ಮೈನಾರಿಟಿ ಸಮಿತಿಯಲ್ಲಿದ್ದೇನೆ. ಅಲ್ಲಿರುವ ಕಲ್ಯಾಣ ಕಾರ್ಯಕ್ರಮದಲ್ಲಿ ಪ್ರತೀ ತಿಂಗಳು ಪರಿಶೀಲನಾ ಸಭೆ ಮಾಡುತ್ತೇವೆ.
ಹಿಂದುಳಿದವರು ಶೇ 75 ಇದ್ದಾರೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮುಸ್ಲಿಂ, ಸಿಖ್, ಪಾರ್ಸಿ ಎಲ್ಲರೂ ಬರುತ್ತಾರೆ. ಮುಸ್ಲಿಂ ಕಾರ್ಯಕ್ರಮದಲ್ಲಿ ಶಾದಿ ಮಾಲ್ ಸೇರಿದಂತೆ ಹಲವು ವಿಚಾರ ಚರ್ಚೆಗೆ ಬರಲಿದೆ ಎಂದರು.ಸಹಜವಾಗಿ ಎಷ್ಟು ಮಸೀದಿ, ಚರ್ಚ್ ಇದೆ ಎಂದು ಕೇಳಿದ್ದೇವೆ. ದರ್ಗ, ಚರ್ಚ್, ಸ್ಮಶಾನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಹಾಗಾಗಿ ಕಮಿಟಿಯಲ್ಲಿ ವರದಿ ಕೇಳಿದ್ದೇವೆ. ಸುಮಾರು 1,790 ಚರ್ಚ್ ಇರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ವಿವರಿಸಿದರು. ಆದರೆ ಚರ್ಚ್ಗಳ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಗಲಾಟೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.