ಮೈಸೂರು: ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ಹಾಗೂ ಸಾ ರಾ ಮಹೇಶ್ ನಡುವೆ ಆಗಾಗ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಇದೀಗ ರೋಹಿಣಿ ಮುಜರಾಯಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸಾ ರಾ ಮಹೇಶ್ ಹಾಕಿರುವ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಕೇಸ್ ವಿಚಾರದಲ್ಲಿ ಕೋರ್ಟ್ ಗೆ ಹೋಗಿ ಹೇಳಿಕೆ ನೀಡಬೇಕಾದ ಅನಿವಾರ್ಯತೆ ತಲೆದೂರಿದೆ.
ಮೈಸೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಾರಾ ಮಹೇಶ್ ಬರೋಬ್ಬರಿ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದೇ ಕೇಸ್ ನಲ್ಲಿ ಸಿಂಧೂರಿ ಕೋರ್ಟ್ ಗೆ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸಾರಾ ಮಹೇಶ್ ಮೇಲೆ ಭೂಕಬಳಿಕೆ ಆರೋಪ ಮಾಡಿದ್ದರು. ಸಾರಾ ಮಹೇಶ್ ಜೈಲಿನಲ್ಲಿರಬೇಕಿತ್ತು, ಕಂಬಿ ಎಣಿಸಬೇಕಿತ್ತು ಎಂದೆಲ್ಲಾ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಅದರ ಆಧಾರದ ಮೇಲೆ, ಹಿರಿಯ ವಕೀಲ ಅರುಣ್ ಕುಮಾರ್ ಲೀಗಲ್ ನೋಟೀಸ್ ಕೂಡ ನೀಡಿದ್ದಾರೆ. ಆ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಸಿಂಧೂರಿ ಉತ್ತರಿಸಬೇಕಾದ ಅನಿವಾರ್ಯತೆ ಇದೆ.