Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆರ್ಯವೈಶ್ಯರಲ್ಲಿ ಬರೀ ಲಕ್ಷ್ಮಿ ಮಾತ್ರವಲ್ಲ, ಸರಸ್ವತಿಯೂ ಇದ್ದಾಳೆ : ಡಾ.ಪಿ.ಯಶೋಧಾ ರಾಜಶೇಖರಪ್ಪ

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್            ಮೊ : 78998 64552

ಚಿತ್ರದುರ್ಗ, ಸುದ್ದಿಒನ್, (ಆ.10) : ಅತ್ಯಂತ ಅಪರೂಪದ ಪ್ರಬಂಧಗಳನ್ನು ಬರೆಯುವರು ಇದ್ದಾರೆ. ಪ್ರಬಂಧಗಳ ಹಾಸು ದೊಡ್ಡದು, ಕೃಷಿ ಕಡಿಮೆ ಎಂದು ಇತಿಹಾಸ ಸಂಶೋಧಕ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಬಿ.ರಾಜಶೇಖರಪ್ಪ ಹೇಳಿದರು.

ಆದಿತ್ಯ ಸಾಹಿತ್ಯ ಪ್ರಕಾಶನ ಶ್ರೀಮತಿ ಸತ್ಯಪ್ರಭಾ ವಸಂತ ಕುಮಾರ್‌ ರವರ ಹೂರಣ-ತೋರಣ ಪ್ರಬಂಧ ಸಂಕಲನವನ್ನು ದಾವಣಗೆರೆ ರಸ್ತೆಯಲ್ಲಿರುವ ಜಗಳೂರು ಮಹಲಿಂಗಪ್ಪ ಟವರ್ಸ್‍ನ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮೂವತ್ತು ಲೇಖನಗಳುಳ್ಳ ಹೂರಣ-ತೋರಣ ಪ್ರಬಂಧ ಸಂಕಲನದಲ್ಲಿ ವೈವಿದ್ಯಮ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಹಬ್ಬಗಳ ವಿಶೇಷತೆಯನ್ನು ಸತ್ಯಪ್ರಭಾ ವಸಂತಕುಮಾರ್ ತಮ್ಮ ಬರವಣಿಗೆ ಮೂಲಕ ಸಮಾಜಕ್ಕೆ ಸಮರ್ಪಿಸಿದ್ದಾರೆ. ಹಾಗಾಗಿ ಹೂರಣ-ತೋರಣ ಎಂಬ ಹೆಸರು ಅರ್ಥಪೂರ್ಣವಾಗಿದೆ ಎಂದು ಗುಣಗಾನ ಮಾಡಿದರು.

ಭಗವದ್ಗೀತೆ ಶ್ಲೋಕ, ವಚನ, ತ್ರಿಪದಿಗಳ ಜೋಡಣೆ ಈ ಪ್ರಬಂಧ ಸಂಕಲನದಲ್ಲಿದೆ. ಹೆಣ್ಣು, ಗಾಂಧಿ ಹಾಗೂ ಇನ್ನು ಅನೇಕ ವಿಚಾರಗಳನ್ನು ಕುರಿತಾಗಿ ಪ್ರಬಂಧ ರಚಿಸಿದ್ದಾರೆ. ಮನರಂಜನೆಯ ಜೊತೆ ತಿಳುವಳಿಕೆಯುಳ್ಳ ಬರಹಗಳಿವೆ. ಮೌಲ್ಯ, ಪ್ರಜ್ಞೆ ಬೆಳೆಸುವ ಕೆಲಸವಾಗಿದೆ. ಕಥೆ ಪ್ರಾರಂಭದ ಶೈಲಿಯಲ್ಲಿ ಪ್ರಬಂಧ ಸಂಕಲನವಿದ್ದರೂ ಎಚ್ಚರಿಕೆ, ಸಾಮಾಜಿಕ ದೃಷ್ಟಿಕೋನ, ಆರೋಗ್ಯಕರ ನಿಲುವನ್ನು ಈ ಸಂಕಲನ ಒಳಗೊಂಡಿರುವುದು ವಿಶೇಷ ಎಂದರು.

ಮತ್ತೆ ಹೊರಟಿತು ತೇರು ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಪಿ.ಯಶೋಧಾ ರಾಜಶೇಖರಪ್ಪ ಆರ್ಯವೈಶ್ಯ ಜನಾಂಗದಲ್ಲಿ ಬರೀ ಲಕ್ಷ್ಮಿ ಮಾತ್ರವಲ್ಲ. ಸರಸ್ವತಿಯೂ ಇದ್ದಾಳೆ ಎನ್ನುವುದನ್ನು ಶ್ರೀಮತಿ ಸತ್ಯಪ್ರಭಾ ವಸಂತಕುಮಾರ್ ತಮ್ಮ ಕಥಾಸಂಕಲನ ಮತ್ತು ಪ್ರಬಂದ ಸಂಕಲನದ ಮೂಲಕ ಸಾಬೀತುಪಡಿಸಿದ್ದಾರೆ. ಅದಕ್ಕಾಗಿ ಆರ್ಯವೈಶ್ಯ ಜನಾಂಗದವರು ಹೆಮ್ಮೆ ಪಡಬೇಕು ಎಂದು ಹೇಳಿದರು.

ಸಂಸ್ಕೃತಿ, ಪರಂಪರೆ, ಆಚರಣೆ, ಸಂಪ್ರದಾಯದ ಜೊತೆ ಜಾಗತಿಕ ಪ್ರಜ್ಞೆ ಕಥಾಸಂಕಲನದಲ್ಲಿ ಮೂಡಿ ಬಂದಿದೆ. ಮಾಸ್ತಿಯವರ ಬರವಣಿಗೆ ಹೇಗೆ ಸರಳ ಶೈಲಿಯಲ್ಲಿದೆಯೋ ಅದೇ ಮಾದರಿಯಲ್ಲಿ ಈ ಸಂಕಲನದಲ್ಲಿನ ಕಥೆಗಳಿವೆ. ಮಾನವೀಯ ಸಂಬಂಧಗಳ ಜೊತೆ ಮನುಷ್ಯ ಹೇಗೆ ಸಾಗಬೇಕು ಎನ್ನುವ ಸೂಕ್ಷ್ಮತೆಯನ್ನು ಕಥಾಸಂಕಲನ ಒಳಗೊಂಡಿದೆ ಎಂದು ಬಣ್ಣಿಸಿದರು.

ಯಾರನ್ನು ಟೀಕಿಸದೆ ಯಾರ ಮನಸ್ಸಿಗೂ ಬೇಸರವಾಗದಂತೆ ನವಿರಾದ ಬರವಣಿಗೆ ಮೂಲಕ ಮೂಡಿ ಬಂದಿರುವ ಮತ್ತೆ ಹೊರಟಿತು ತೇರು ಕಥಾ ಸಂಕಲನ ಪ್ರತಿಯೊಬ್ಬರು ಓದುವಂತಿದೆ. ಗ್ರಾಮೀಣ ಪ್ರದೇಶದ ಘಟನೆಗಳು, ಕೌಟುಂಬಿಕ ವಾತಾವರಣದ ಮೇಲೆ ತಮ್ಮ ಮೊನಚಾದ ಬರವಣಿಗೆ ಮೂಲಕ ಸತ್ಯಪ್ರಭಾ
ವಸಂತಕುಮಾರ್ ಬೆಳಕು ಚೆಲ್ಲಿದ್ದಾರೆ. ಕಥಾಸಂಕಲನದಲ್ಲಿರುವ ಹದಿನೇಳು ಕಥೆಗಳಲ್ಲಿ ವ್ಯಕ್ತಿಗಳಲ್ಲಿರುವ ವಿಶೇಷ ಸ್ವಭಾವಗಳನ್ನು ಗುರುತಿಸಲಾಗಿದೆ. ಸ್ತ್ರೀಪರವಾದ ನಿಲುವುಗಳು, ಅಸ್ಪೃಶ್ಯತೆ ಯನ್ನು ವಿರೋಧಿಸುವ ಬರಹಗಳಿಂದ ಕೂಡಿದೆ. ಆಧುನಿಕ ಬದುಕಿನಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಪರಿಪಾಟಲುಗಳನ್ನು ಕಥೆಗಳ ಮೂಲಕವೇ ಪರಿಚಯಿಸಿದ್ದಾರೆ. ಮಹಿಳೆಯರು ಇಂತಹ ಕೃತಿಗಳನ್ನು ಬರೆಯುವುದು ಕಡಿಮೆ. ಹಾಗಾಗಿ ಸತ್ಯಪ್ರಭಾ ವಸಂತಕುಮಾರ್‍ರವರ ಎರಡು ಕೃತಿಗಳು ಅಮರವಾಗಿ ಉಳಿಯುತ್ತವೆ ನಗರ ಮತ್ತು ಗ್ರಾಮೀಣ ಸಂಪ್ರದಾಯ, ಆಚಾರ, ವಿಚಾರಗಳನ್ನು ಸಮಾನವಾಗಿ ಕಂಡಿದ್ದಾರೆ. ಆದ್ದರಿಂದ ಈ ಪುಸ್ತಕದ ಓದು ಕೆಲವು ಮನಸ್ಸುಗಳನ್ನಾದರೂ ಬದಲಾವಣೆಯತ್ತ ಕರೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದರು.

ಲೇಖಕಿ ಸತ್ಯಪ್ರಭಾ ವಸಂತಕುಮಾರ್ ಮಾತನಾಡುತ್ತ ನಾಡು, ನುಡಿ, ಭಾಷೆಯನ್ನು ಬೆಳೆಸಿ ಹಂಚಬೇಕಾಗಿದೆ. ಭಾಷೆ ಬೆಳೆಸಿದರೆ ನಾವು ಉಳಿಯುತ್ತೇವೆ. ದೇಶ ಉಳಿಯುತ್ತದೆ. ಭಾಷೆಗೆ ನೆಲೆಗಟ್ಟನ್ನು ಒದಗಿಸುವ ಶಕ್ತಿಯಿದೆ. ಗ್ರಂಥಾಲಯಗಳಲ್ಲಿ ಪುಸ್ತಕಗಳು ಇದ್ದರೆ ಓದುವವರ ಸಂಖ್ಯೆ ಜಾಸ್ತಿಯಾಗುತ್ತದೆ ಎಂದು ಕೃತಿಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.

ವಾಸವಿ ವಿದ್ಯಾಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಮಾತನಾಡಿ ಆರ್ಯವೈಶ್ಯ ಜನಾಂಗದಲ್ಲಿ ಮಹಿಳಾ ಬರಹಗಾರರು ಸಿಗುವುದು ತುಂಬಾ ವಿರಳ. ಅದಕ್ಕಾಗಿ ಶ್ರೀಮತಿ ಸತ್ಯಪ್ರಭಾ ವಸಂತಕುಮಾರ್‍ರವರು ತಮ್ಮ ಎರಡು ಕೃತಿಗಳನ್ನು ಹೊರತಂದಿರುವುದು ಹೆಮ್ಮ ಪಡುವಂತ ವಿಷಯ. ಇಂತಹ ಬರಹಗಾರರು ಎಲ್ಲಿಯೇ ಇರಲಿ ಪ್ರೋತ್ಸಾಹಿಸಿ ಉತ್ತೇಜಿಸುವುದು ಎಲ್ಲರ ಜವಾಬ್ದಾರಿ. ಓದುಗರು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಕಥೆಗಳನ್ನು ಹೆಣದಿರುವುದು ನಮಗೆಲ್ಲರಿಗೂ ಹೆಮ್ಮೆ ಪಡಬೇಕು   ಎಂದು ಶ್ಲಾಘಿಸಿದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಲಿಂಗಶ್ರೇಷ್ಟಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್, ಆರ್ಯವೈಶ್ಯ ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷ ಟಿ.ವಿ.ಸುರೇಶ್‍ಗುಪ್ತ, ವಸಂತಕುಮಾರ್ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಡಿಸೆಂಬರ್ 23 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ಡಿಸೆಂಬರ್. 23 ರ, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ

ಚಿತ್ರದುರ್ಗ | ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನೆರವೇರಿದ 25 ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಡಿ. 23 : ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 25 ನೇ ವರ್ಷದ ಬ್ರಹ್ಮೋತ್ಸವ

ಚಿತ್ರದುರ್ಗ | ಅಮಿತ್ ಷಾ ಮತ್ತು ಸಿ.ಟಿ. ರವಿ ವಿರುದ್ಧ AAP ಆಕ್ರೋಶ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಡಿ. 23 : ಡಾ. ಬಿ.ಆರ್ ಅಂಬೇಡ್ಕರ್‌ರವರ ಬಗ್ಗೆ ಅವಹೇಳನಕಾರಿಯಾದ ಮಾತುಗಳನ್ನು ಆಡಿದ ಕೇಂದ್ರ ಗೃಹ

error: Content is protected !!