ದಾವಣಗೆರೆ: ಇತ್ತೀಚೆಗೆ ಮಾಜಿ ಸಚಿವ ಈಶ್ವರಪ್ಪ ಅವರು ಕೂಡ ಮುಸ್ಲಿಂರು ಭಯೋತ್ಪಾದಕರಲ್ಲ ಎಂದು ಹೇಳಿದ್ದರು. ಇದೀಗ ಶಾಸಕ ರೇಣುಕಾಚಾರ್ಯ ಅವರು ಕೂಡ ಅದೇ ರೀತಿ ಹೇಳಿಕೆ ನೀಡಿದ್ದಾರೆ. ಎಲ್ಲಾ ಮುಸ್ಲಿಂರು ಭಯೋತ್ಪಾದಕರಲ್ಲ. ದೇಶದ್ರೋಹಿಗಳನ್ನು ಬೆಂಬಲಿಸುವ ಕೃತ್ಯ ಕಾಂಗ್ರೆಸ್ ಮಾಡುತ್ತಿದೆ ಎಂದು ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಜಮೀರ್ ಬಗ್ಗೆ ಕಿಡಿಕಾರಿದ ಶಾಸಕ ರೇಣುಕಾಚಾರ್ಯ ಅವರು, ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರಿಗೆ ಫುಡ್ ಕಿಟ್ ಕೊಡುವುದು ಎಷ್ಟು ನ್ಯಾಯ..? ಕಾಂಗ್ರೆಸ್ ಮುಖಂಡ ಜಮೀರ್ ಬೆಂಬಲಿಗರು ಈ ರೀತಿ ಮಾಡುತ್ತಿದ್ದಾರೆ. ಮುಗ್ಧ ವಿದ್ಯಾರ್ಥಿ ಸ್ಟೇಟಸ್ ಹಾಕಿದ ಅರ್ಧ ಗಂಟೆಗೆ ಪೊಲೀಸ್ ಠಾಣೆ ಮುಂದೆ ಅಷ್ಟೊಂದು ಜನ ಸೇರುತ್ತಾರಲ್ಲ ಹೇಗೆ..? ಸ್ಟೇಟಸ್ ಹಾಕಿದವನಿಗೆ ಶಿಕ್ಷೆಯಾಗುತ್ತಿತ್ತು.
ಎಲ್ಲರೂ ಒಂದಾಗಿ ಬಾಳಬೇಕು ಎಂಬುದು ಬಿಜೆಪಿ ಸಿದ್ಧಾಂತವಾಗಿದೆ. ಕಾಂಗ್ರೆಸ್ ನವರು ಹೇಳಬೇಕು. ನಿಮಗೆ ಅಲ್ಪಸಂಖ್ಯಾತರು ಬೇಕೋ ಅಥವಾ ಖುರ್ಚಿ ಬೇಕೋ ಅಥವಾ ಹಿಂದುಗಳು ಬೇಕೋ. ಕಾಂಗ್ರೆಸ್ ನಾಯಕರು ಗಲಭೆ ಮಾಡಿದವರನ್ನು ಮುಗ್ದರು ಎಂದು ಸದನದಲ್ಲಿ ಹೇಳಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದರು. ಚಂದ್ರು ಹತ್ಯೆಯಾದಾಗ ಜಮೀರ್ ಏನು ಮಾಡಿದ್ದ ಅನ್ನೋದು ಗೊತ್ತಿದೆ. ಖುರ್ಚಿಗಾಗಿ ಕಾಂಗ್ರೆಸ್ ನವರು ಏನು ಬೇಕಾದರು ಮಾಡುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.