ಚಳ್ಳಕೆರೆ, (ಫೆ.28) : ವಿಜ್ಞಾನವು ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿದೆ, ಯಾವುದೇ ವಿಚಾರವನ್ನು ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬಾರದು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ತಯಾರಿಸಿದ ವಿಜ್ಞಾನ ವಸ್ತುವಿಷಯಕ್ಕೆ ಸಂಬಂದಿಸಿದಂತೆ ಮಾಡಲ್‍ಗಳನ್ನು ವಿಕ್ಷಿಸಿ ನಂತರ ಮಾತನಾಡಿದರು.
ಬೆಳೆಯುವ ಕುಡಿ, ಮೊಳಕೆಯಲ್ಲಿ ಎಂಬ ಮಾತಿನಂತೆ ಇಂದು ವಿಶೇಷವಾಗಿ ಶಾಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಮಕ್ಕಳು ತಮ್ಮ ಮಾಡಿದ ವಸ್ತುಗಳನ್ನು ಇಂದು ಅವರ ವಿವರಣೆ ಅವರ ಪೀಳಿಗೆಗೆ ದಾರಿ ದೀಪವಾಗಲಿದೆ, ವಿಭಿನ್ನವಾದ ಮಕ್ಕಳ ಆಲೋಚನಾ ಶಕ್ತಿಗೆ ತಕ್ಕಂತೆ ಕಚ್ಚಾ ವಸ್ತುಗಳಿಂದ ಸಿದ್ದ ವಸ್ತುಗಳಾಗಿ ತಯಾರಿಸಿ ದೇಶದಲ್ಲಿ ದಿನನಿತ್ಯ ನಡೆಯುವ ಘಟನಾವಳಿಗಳ ಸನ್ನಿವೇಶಗಳ ಚಿತ್ರಣಗಳ ಕುರಿತಾದ, ಮಾಡಲ್‍ಗಳು ಪೇರಣೆಯಾಗಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಆಟದ ಮೂಲಕ ಪಾಠ, ಪಾಠದ ಮೂಲಕ ಜ್ಞಾನ ಎಂಬುದು ಅಕ್ಷರ ಷಾ ಸತ್ಯ ಎಂಬುದನ್ನು ಚಳ್ಳಕೆರೆ ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.
ಮಕ್ಕಳಿಗೆ ವಿಜ್ಞಾನದ ವಿಷಯದ ಹಲವು ಪರಿಕಲ್ಪನೆಗಳನ್ನು ಚಟುವಟಿಕೆಗಳ ಮೂಲಕ ಮನನ ಮಾಡಿಕೊಳ್ಳುವುದರ ಮೂಲಕ ಆಧುನಿಕ ಕಾಲಘಟ್ಟದಲ್ಲಿ ಮೂಢನಂಬಿಕೆಗಳ ಹೊರ ದೂಡುವ ಮೂಲಕ ಸತ್ಯಾಸತ್ಯತೆಗಳನ್ನು ತಿಳಿಯಬೇಕೆಂದು ಕರೆಕೊಟ್ಟರು ಎಂದರು.
ಶಾಲೆಯ ಕಾರ್ಯದರ್ಶಿ ಪಿ.ದಯಾನಂದ್ ಮಾತನಾಡಿ, ವಿಜ್ಞಾನ ದಿನವನ್ನು ಮಕ್ಕಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕೇಳದೆ ಸ್ವಯಂ ಕಲಿಕೆ ಮೂಲಕ ಅಧ್ಯಯನವಾಗಬೇಕು.
ತರಬೇತಿಯಲ್ಲಿ ಇಂದು ವಿದ್ಯಾರ್ಥಿಗಳು ತಮಗೆ ರೂಡಿಗತವಾದ ವಸ್ತುಗಳನ್ನು ಕಚ್ಚಾ ವಸ್ತುಗಳ ಮೂಲಕ ಅವರ ವಿವೇಚನೆಗೆ ತಿಳಿದ ಹಾಗೆ ಸ್ವಯಂ ಪ್ರೇರಿತವಾಗಿ ಅವರು ನೋಡಿದ ಹಾಗೂ ತಿಳಿದ ವಸ್ತುಗಳನ್ನು ಮಾಡುವುದುರ ಮೂಲಕ ಮಕ್ಕಳಿಗೆ ಇನ್ನಷ್ಟು ಪ್ರೋತ್ಸಾಹಿಸಿ ಸಹಕರಿಸಿದ್ದೆವೆ ಎಂದರು.
ಈ ಸಂಧರ್ಭದಲ್ಲಿ ತೀರ್ಪುಗಾರರಾಗಿ ಕೆ.ಎಸ್.ಶ್ರೀಕಾಂತ್, ಎನ್.ರಾಧಮಣಿ, ಶಾಂತಕುಮಾರಿ, ಮಹದೇವಕುಮಾರ್, ಶ್ರೇಯಸ್, ಮಕ್ಕಳ ವಸ್ತುಗಳನ್ನು ನೋಡಿ ಬಹುಮಾನ ನೀಡಲು ಮಾದರಿಗಳನ್ನು ಸಂಗ್ರಹಿಸಿದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರಾಜೇಶ್‍ಗುಪ್ತ, ಗೌರವಾಧ್ಯಕ್ಷ ಡಿ.ನಾಗತಪ್ಪ, ಖಜಾಂಚಿ ಕಿರಣ್‍ಕುಮಾರ್, ಸಂಸ್ಥೆಯ ನಿದೇರ್ಶಕರಾದ ಡಿ.ಶಿವಪ್ರಸಾದ್, ಕಾರ್ಯದರ್ಶಿ ಪಿ.ದಯಾನಂದ್, ಮಧುಕುಮಾರ್, ಮುಖ್ಯಶಿಕ್ಷಕ ಡಿವಿಎನ್. ಪ್ರಸಾದ್, ಶೋಭಾ, ವೀಣಾ, ಸ್ನೇಹಾ, ಶೈಲಜಾ, ನಾಗರಾತ್ನ, ಪವಿತ್ರ, ತೇಜಸ್ವೀ, ರಶ್ಮಿ, ಪ್ರಿಯಾಂಕ, ಆಯುಶ್ ಬಾನು, ಪೂಜಾ, ರಾಧ, ಮೌಸಿನ್‍ತಾಜ್, ರಮಿಜಾ, ಶಾರದಮ್ಮ, ಚಂದ್ರಕಲಾ, ಸಿದ್ದೇಶ್, ನಾಗರಾಜ್, ಇತರು ಹಾಜರಿದ್ದರು.