ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ಕೊನೆ ಗಡುವು ನೀಡಿತ್ತು. ಪ್ರತಿಭಟನೆಗೂ ಸಜ್ಜಾಗಿದ್ದರು. ಇದೀಗ ಸರ್ಕಾರದಿಂದ ಭತವಸೆ ಸಿಕ್ಕಿದೆ ಎನ್ನಲಾಗಿದೆ. ಈ ಸಂಬಂಧ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದು, ಸರ್ಕಾರ ಭರವಸೆ ಈಡೇರಿಸಿಲ್ಲ.. ಹೀಗಾಗಿ ಸಿಎಂ ನಿವಾಸಕ್ಕೆ ಹೋರಾಟ ಮಾಡಲು ತೀರ್ಮಾನ ಮಾಡಿದ್ವಿ. ಈಗಾಗಲೇ ಸಾಕಷ್ಟು ಪೂರ್ವಭಾವಿ ಸಭೆ ಕೂಡ ಮಾಡಿದ್ದೇವೆ. ಒಂದು ಸುತ್ತಲಿನ ಸಭೆ ಕೂಡ ಸೇರಿ ಮಾತುಕತೆ ಆಗಿದೆ.
ಆದರೆ ಈಗ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಸಿಎಂ ಅವರಿಂದ ಭರವಸೆ ಬರುವ ತನಕವೂ ಹೊರಟ ಕೈ ಬಿಡಲ್ಲ ಎಂದಿದ್ವಿ. ಇದೀಗ ಎರಡು ತಿಂಗಳ ಒಳಗಾಗಿ ಭೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಮುಂದಿನ ಆಗಸ್ಟ್ 22ರಂದು ಮೀಸಲಾತಿ ಕೊಡ್ತೀವಿ ಅಂತ ಸಿಎಂ ಹೇಳಿದ್ದಾರೆ. ಹೀಗಾಗಿ ಸಿಎಂ ಮನೆ ಮುಂದೆ ಮಾಡುವ ಪ್ರತಿಭಟನೆ ಮುಂದೂಡಲಾಗಿದೆ. ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಜಾಗ್ರತಿ ಕಾರ್ಯಕ್ರಮ ಮಾಡುತ್ತೇವೆ.
ಆಕಸ್ಮಾತ್ ಭರವಸೆ ಈಡೇರಿಲ್ಲ ಅಂದ್ರೆ ಶಿಗ್ಗಾಂವ್ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ. ಸರ್ಕಾರದ ಮಂತ್ರಿ ಸಿಸಿ ಪಾಟೀಲ್ ಹಾಗೂ ಅರವಿಂದ್ ಬೆಲ್ಲದ್ ನಮ್ಮ ಜೊತೆಗೆ ಇರ್ತಾರೆ. ಆಯೋಗದ ವರದಿ ಪಡೆದು ಸಿಎಂ ಬಸವರಾಜ ಬೊಮ್ಮಾಯಿ ತೀರ್ಮಾನ ಮಾಡ್ತಾರಂತೆ. ಹೋರಾಟ ಶುರುಮಾಡಿದ ಮೇಲೆ ಸರ್ವೇ ಆರಂಭ ಆಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.