ಬೇಸಿಗೆ ಬಂದಿದೆ.. ಮನೆಯಿಂದ ಹೊರ ಹೋಗೋದಕ್ಕೇನೆ ನೆತ್ತಿ ಸುಡುತ್ತಿದೆ. ನೆತ್ತಿ ಸುಡದಂತೆ ಕಾಪಾಡಿಕೊಳ್ಳಲು ಕೊಡೆ, ಸ್ಕ್ರಾಪ್ ಏನಾದ್ರೂ ಬಳಕೆ ಮಾಡಿಕೊಂಡು ನೆತ್ತಿಯ ಬಿಸಿಯಿಂದ ರಕ್ಷಿಸಿಕೊಳ್ಳಬಹುದು. ಆದರೆ ಈ ಬಿಸಿಲಿನಿಂದ ಚರ್ಮವನ್ನ ರಕ್ಷಿಸಿಕೊಳ್ಳುವುದು ಸುಲಭವಲ್ಲ. ಎಷ್ಟೇ ಕವರ್ ಮಾಡಿಕೊಂಡರುಚರ್ಮದ ಕಾಂತಿ ಹಾಳಾಗುತ್ತದೆ. ಟ್ಯಾನ್ ಆಗುತ್ತದೆ. ಈ ಬಿಸಿಲಿನಲ್ಲಿ ಚರ್ಮದ ರಕ್ಷಣೆ ಮಾಡಿಕೊಳ್ಳುವುದಕ್ಕೆ ನಾನಾ ಕಸರತ್ತನ್ನ ಮಾಡುತ್ತೇವೆ. ಸನ್ ಸ್ಕ್ರೀನ್ ಲೋಷನ್ ಸೇರಿದಂತೆ ಅನೇಕ ಕ್ರೀಮ್ ಗಳನ್ನ ಬಳಸುತ್ತೇವೆ. ಕೆಲವೊಬ್ಬರಿಗೆ ಈ ರೀತಿಯ ಕ್ರೀಮ್ ಗಳು ಸೆಟ್ ಆಗೋದಿಲ್ಲ. ಕ್ರೀಮ್ ಗಳನ್ನ ಬಿಟ್ಟು ಗೆಣಸನ್ನ ತಿನ್ನಿ. ಚರ್ಮದ ಕಾಂತಿಗೆ ಬಿಸಿಲು ಕೂಡ ಏನು ಮಾಡಲ್ಲ. ಇದರಲ್ಲಿ ಪ್ರೋಟೀನ್ ಹೆಚ್ಚಾಗಿರುವ ಕಾರಣ ಚರ್ಮದ ಕಾಂತಿ ಕೂಡ ಹೆಚ್ಚಾಗಲಿದೆ.
ಗೆಣಸಿನಲ್ಲಿ ಕ್ಯಾಲೋರಿಸ್ ಕಡಿಮೆ ಇದ್ದು, ಫೈಬರ್ ಅಂಶ ಜಾಸ್ತಿಯಿದೆ. ಇದರಿಂದ ತೂಕವನ್ನು ಕೂಡ ಸುಲಭವಾಗಿ ಇಳಿಸಬಹುದು. ಯಾಕಂದ್ರೆ ಗೆಣಸನ್ನು ತಿಂದ ಕೂಡಲೇ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಗೆಣಸಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿ ಇರುವ ಕಾರಣ, ಇದರಿಂದ ರಕ್ತದೊತ್ತಡವನ್ನ ಸರಿಪಡಿಸುತ್ತದೆ. ಸೋಡಿಯಂ ಲೆವೆಲ್ ಅನ್ನ ಸರಿ ಪಡಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕೂಡ ದೂರವಾಗುತ್ತದೆ. ಗೆಣಸಲ್ಲಿರುವ ಬೀಟಾ ಅಂಶವೂ ತಿಂದ ಮೇಲೆ ದೇಹಸಲ್ಲಿ ವಿಟಮಿನ್ ಎ ಆಗಿ ಕನ್ವರ್ಟ್ ಆಗುತ್ತದೆ. ಇದರಿಂದ ಕಣ್ಣಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಹಲವು ಸಮಸ್ಯೆಗಳಿಗೆ ಒಂದೇ ಆಹಾರದಿಂದ ಪರಿಹಾರ ಸಿಗಲಿದೆ ಎಂದರೆ ಪ್ರತಿದಿನ ನಿಮ್ಮ ಆಹಾರದಲ್ಲಿ ಗೆಣಸನ್ನ ಬಳಕೆ ಮಾಡುವುದರಿಂದ ಬಹಳ ಮುಖ್ಯವಾಗಿ ಬಿಸಿಲಿನಿಂದ ಚರ್ಮವನ್ನ ತಪ್ಪಿಸಿಕೊಳ್ಳಬಹುದು.
ದಾವಣಗೆರೆ; ಇಂದು ದ್ವಿತೀಯ ಪಿಯು ಫಲಿತಾಂಶವನ್ನು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಮಕ್ಕಳು ಫೇಲ್…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08 : ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ ಹಾಗೂ ಛಾಯಾಗ್ರಾಹಕ ಶಂಕರ್ ಇವರ ತಾಯಿ ಲಕ್ಷ್ಮಮ್ಮ…
ಚಳ್ಳಕೆರೆ, ಏಪ್ರಿಲ್. 08 : 2025 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಪ್ರತಿ ವರ್ಷದ ಹಾಗೆ ಈ ಬಾರಿಯೂ…
ಚಿತ್ರದುರ್ಗ. ಏ.08: ಜಿಲ್ಲೆಯಲ್ಲಿ ಕಳೆದ ಮಾರ್ಚ್ 01 ರಿಂದ 20ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…