ಗುಜರಾತ್: ಇತ್ತಿಚೆಗೆ ಹಿಂದಿ ಭಾಷೆ ವಿಚಾರಕ್ಕೆ ಚರ್ಚೆಗಳು ಸಾಕಷ್ಟು ನಡೆದಿವೆ. ಈ ಬೆನ್ನಲ್ಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿಕೆ ಮಹತ್ವ ಪಡೆದಿದೆ.
ಗುಜರಾತ್‌ನಲ್ಲಿ ನಡೆದ ಎರಡು ದಿನಗಳ ಶಿಕ್ಷಣ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಕಳೆದ ಹಲವು ದಿನಗಳಿಂದ ಭಾಷೆಗಳ ವಿಚಾರದಲ್ಲಿ ಹಲವು ಅನುಮಾನಗಳು ಎದುರಾಗಿವೆ.ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಮುಖ್ಯಸ್ಥರಾದ ಡಾ .ಕೆ. ಕಸ್ತೂರಿರಂಗನ್ ಅವರು ಸ್ಥಳೀಯ ಭಾಷೆಗಳು ಅಥವಾ ಬುಡಕಟ್ಟು ಭಾಷೆಗಳು ಎಂದು ಬಳಸುವ ಬದಲು ‘ಮಾತೃ ಭಾಷೆ’ಗಳು ಎಂಬ ಪದವನ್ನು ಸೂಚಿಸಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ಈ ಎಲ್ಲಾ ಭಾಷೆಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಪ್ರಧಾನ್ ಹೇಳಿದ್ದಾರೆ.