ನವದೆಹಲಿ: ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲೇ ಮೂರನೆ ಅಲೆ ಕಾಣಿಸಿಕೊಳ್ಳುತ್ತೆ. ಇದು ಮಕ್ಕಳಿಗೆ ಈ ಬಾರಿ ಸಂಕಷ್ಟ ಎಂದು ಹೇಳಲಾಗಿತ್ತು. ಆದ್ರೆ ವ್ಯಾಕ್ಸಿನೇಷನ್ ಆಗಿದ್ರಿಂದ ಮೂರನೆ ಅಲೆ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ತಜ್ಞರು ನೀಡಿದ ಸಮಾಯಾವಾಧಿಯೂ ಮುಗಿದಿದೆ. ಆದ್ರೆ ಈಗ ಕೊರೊನಾ ತನ್ ರೂಪ ಬದಲಿಸಿಕೊಂಡು ಎಲ್ಲೆಡೆ ಹರಡಲು ಶುರು ಮಾಡಿದೆ.
ಹೌದು ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್ ಆತಂಕ ಈಗ ಎಲ್ಲೆಡೆ ಜಾಸ್ತಿಯಾಗಿದೆ. ಯಾಕಂದ್ರೆ ಅತಿ ವೇಗವಾಗಿ ಹರಡುತ್ತದೆ. ಎಂಬುದೆ ಜನರಿಗಿರುವ ಭಯ. ಈಗಾಗಲೇ ದೇಶದಲ್ಲಿ ಒಮಿಕ್ರಾನ್ ವೈರಸ್ 23 ಜನರ ದೇಹ ಸೇರಿದೆ. ಅತಿ ವೇಗವಾಗಿ ಹರಡುವ ಕಾರಣ ಇನ್ನೆಷ್ಟು ಜನಕ್ಕೆ ಹಬ್ಬುತ್ತೋ ಎಂಬ ಆತಂಕ ಎಲ್ಲರ ಮನದಲ್ಲೂ ಇದೆ.
ಇನ್ನು ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಟೆಕ್ನಾಲಜಿಯ ವಿಜ್ಞಾನಿ ಮನೀಂದ್ರ ಅಗರ್ವಾಲ್, ಫೆಬ್ರವರಿಯಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ. ದೇಶದಲ್ಲಿ ಪ್ರತಿ ದಿನ ಒಂದರಿಂದ ಒಂದು ಲಕ್ಷ ಪ್ರಕರಣಗಳು ಕಾಣಿಸಿಕೊಳ್ಳಲಿವೆ ಎಂದಿದ್ದಾರೆ.
ಮೂರನೆ ಅಲೆ ಎರಡನೆ ಅಲೆಯಷ್ಟು ತೀವ್ರವಾಗಿರುವುದಿಲ್ಲ. ಒಮಿಕ್ರಾನ್ ನಿಂದಲೇ ಮೂರನೆ ಅಲೆ ಉಂಟಾದರೂ ಡೆಲ್ಟಾ ಅಷ್ಟು ತೀವ್ರವಾಗಿರುವುದಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಆದ್ರೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಸೂಚನೆ ನೀಡಿದ್ದಾರೆ.