ಹೈದ್ರಾಬಾದ್: ತೆಲುಗು ಖ್ಯಾತ ನಟ ಬಾಲಕೃಷ್ಣ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದರು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೈದ್ರಾಬಾದ್ ನ ಬಂಜಾರ ಹಿಲ್ಸ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಮಾನಿಗಳು ತಮ್ಮ ನಟನಿಗೆ ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಅಪ್ಪು ನಿಧನರಾದಾಗ ಬಾಲಕೃಷ್ಣ ಅವರು ಕೂಡ ಬಂದು ಅಂತಿಮ ದರ್ಶನ ಪಡೆದಿದ್ದರು. ಶಿವಣ್ಣನನ್ನು ತಬ್ಬಿ ಕಣ್ಣೀರು ಹಾಕಿದ್ದರು.