ತೆಲಂಗಾಣ: ನವೆಂಬರ್ 30ರಂದು ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯಲಿದೆ. ಇದರ ಪ್ರಚಾರ ಕಾರ್ಯದಲ್ಲಿ ಕರ್ನಾಟಕದ ಸಚಿವ ಜಮೀರ್ ಅಹ್ಮದ್ ತೊಡಗಿದ್ದಾರೆ. ಕಾಂಗ್ರೆಸ್ ಗೆಲುವಿಗಾಗಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜನರನ್ನುದ್ದೇಶಿಸಿ ಮಾತನಾಡುವಾಗಲೇ ಯಡವಟ್ಟಿನ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಸ್ಪೀಕರ್ ಎದುರು ನಮಸ್ಕಾರ್ ಸಾಬ್ ಎಂದು ನಿಂತುಕೊಳ್ಳಬೇಕು. ಒಳ್ಳೊಳ್ಳೆಯ ಬಿಜೆಪಿ ಶಾಸಕರೂ ಹೀಗೆ ನಿಲ್ಲುವಂತೆ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ನಲ್ಲಿ ನಾವೂ 9 ಜನ ಮುಸ್ಲಿಂರು ಗೆದ್ದಿದ್ದೇವೆ. ಒಂಭತ್ತು ಜನರಲ್ಲಿ ಐದು ಮಂದಿಗೆ ಅಧಿಕಾರ ಸಿಕ್ಕಿದೆ. ನನ್ನನ್ನು ಸಚಿವನನ್ನಾಗಿ ಮಾಡಿದೆ. ಸಲೀಂ ಅಹಮದ್ಗೆ ಚೀಫ್ ವಿಪ್ ನೀಡಲಾಗಿದೆ. ನಜೀರ್ ಅಹಮದ್ಗೆ ಸಿಎಂ ಪೊಲಿಟಿಕಲ್ ಸೆಕ್ರೆಟರಿ ಮಾಡಲಾಗಿದೆ ಎಂದಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಎಂದೂ ಮುಸ್ಲೀಮರು ಸ್ಪೀಕರ್ ಆಗಿರಲಿಲ್ಲ. ಯುಟಿ ಖಾದರ್ ಅವರನ್ನು ಸ್ಪೀಕರ್ ಮಾಡಲಾಗಿದೆ. ಪರಿಣಾಮ ಒಳ್ಳೊಳ್ಳೆಯ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎಂದು ಕೈಮುಗಿದು ನಿಂತ್ಕೋಬೇಕು ಎಂದಿದ್ದಾರೆ. ತೆಲಂಗಾಣದ ಪ್ರಚಾರದ ನಡುವಲ್ಲಿ ಈ ರೀತಿಯಾದ ಹೇಳಿಕೆ ನೀಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ.