ಮೈಸೂರು: ಜಿಲ್ಲೆಯ ಬಸ್ ನಿಲ್ದಾಣಗಳ ನಿರ್ಮಾಣದ ವಿನ್ಯಾಸ ಬಿಜೆಪಿ ಶಾಸಕ ಹಾಗೂ ಸಂಸದರ ಮಾತಿನ ಚಕಮಕಿಗೆ ಕಾರಣವಾಗಿತ್ತು. ಪ್ರತಾಪ್ ಸಿಂಹ ಇದು ಮಸೀದಿಯೇ. ನಾನೇ ಜೆಸಿಬಿ ತಂದು ಕೆಡವುತ್ತೇನೆ ಎಂದಿದ್ದರು. ಎರಡು ದಿನಗಳ ಕಾಲಾವಕಾಶ ಕೂಡ ನೀಡಿದ್ದರು. ಇದೀಗ ಸಂಸದರ ನಡೆಗೆ ಗೆಲುವು ಸಿಕ್ಕಿದೆ, ಬಸ್ ನಿಲ್ದಾಣದ ವಿನ್ಯಾಸ ಬದಲಾವಣೆಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿರುವ ಪ್ರತಾಪ್ ಸಿಂಹ, ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು ಎಂದಿದ್ದಾರೆ.